ವಾಡಾದ ಉದ್ದೀಪನ ದ್ರವ್ಯ ಪರೀಕ್ಷೆಯಲ್ಲಿ ವಿಫಲವಾದವರಲ್ಲಿ ಭಾರತೀಯರೇ ಹೆಚ್ಚು!

Update: 2024-04-05 16:13 GMT

Photo : NDTV

ಹೊಸದಿಲ್ಲಿ : 2022ರಲ್ಲಿ ವಿಶ್ವ ಉದ್ದೀಪನ ದ್ರವ್ಯ ನಿಗ್ರಹ ಸಂಸ್ಥೆ (ವಾಡಾ) ನಡೆಸಿರುವ ಪರೀಕ್ಷೆಗಳಲ್ಲಿ ಸಿಕ್ಕಿಬಿದ್ದಿರುವ ಅತ್ಲೀಟ್‌ ಗಳ ಪೈಕಿ ಭಾರತೀಯರ ಸಂಖ್ಯೆ ಅತ್ಯಧಿಕವಾಗಿದೆ ಎಂದು ಅದು ಬಿಡುಗಡೆಗೊಳಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.

ಮೂತ್ರ, ರಕ್ತ ಮತ್ತು ಅತ್ಲೀಟ್‌ ಗಳ ಜೈವಿಕ ಪಾಸ್ಪೋರ್ಟ್ ಗಳು ಸೇರಿದಂತೆ ಭಾರತೀಯರಿಂದ ಒಟ್ಟು 4,064 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈಗ ವಾಡ ಬಿಡುಗಡೆಗೊಳಿಸಿರುವ ಅಂಕಿಸಂಖ್ಯೆಗಳ ಪ್ರಕಾರ, 127 ಭಾರತೀಯ ಅತ್ಲೀಟ್‌ ಗಳು ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದು ಮಾದರಿಗಳ ಪ್ರಮಾಣದ 3.26% ಆಗಿದೆ. ಮಾದರಿಗಳನ್ನು ಇಲ್ಲಿನ ಜೆಎಲ್ಎನ್ ಸ್ಟೇಡಿಯಮ್ನಲ್ಲಿರುವ ರಾಷ್ಟ್ರೀಯ ದ್ರವ್ಯ ನಿಗ್ರಹ ಪ್ರಯೋಗಾಲಯ (ಎನ್ಡಿಟಿಎಲ್)ದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಅದೂ ಅಲ್ಲದೆ, ಇಪಿಒ-ರಿಸೆಪ್ಟರ್ ಅಗೋನಿಸ್ಟ್ಸ್ (ಇಆರ್ಎ) ಪರೀಕ್ಷೆಗಳಲ್ಲಿ ವಿಫಲವಾದ ಮಾದರಿಗಳ ಪೈಕಿ ಗರಿಷ್ಠ ಮಾದರಿಗಳು ಭಾರತಕ್ಕೆ ಸೇರಿವೆ. ಅಂದರೆ, 11 ಮಾದರಿಗಳಲ್ಲಿ ಅಥವಾ 1.8 ಶೇಕಡ ಮಾದರಿಗಳು ‘ಅಡ್ವರ್ಸ್ ಅನಾಲಿಟಿಕಲ್ ಫೈಂಡಿಂಗ್ಸ್ (ಎಎಎಫ್)’ ಅಂದರೆ ಪ್ರತಿಕೂಲ ಫಲಿತಾಂಶಗಳನ್ನು ನೀಡಿವೆ.

ನಂತರದ ಸ್ಥಾನದಲ್ಲಿ ಇರುವುದು ದಕ್ಷಿಣ ಆಫ್ರಿಕ. ಅದರ 4,169 ಮಾದರಿಗಳ ಪೈಕಿ 80 ಮಾದರಿಗಳು ಅಥವಾ 2.04 ಶೇಕಡ ಮಾದರಿಗಳು ಪರೀಕ್ಷೆಯಲಿ ವಿಫಲವಾಗಿವೆ.

ಗರಿಷ್ಠ, ಅಂದರೆ 17,357 ಮಾದರಿಗಳನ್ನು ಚೀನಾ ಪರೀಕ್ಷೆಗೆ ಒಳಪಡಿಸಿತ್ತು. ಆ ಪೈಕಿ ಕೇವಲ 0.25 ಶೇಕಡ ಮಾದರಿಗಳು ವಿಫಲವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News