ʼಡಿಜಿಟಲ್ ಅರೆಸ್ಟ್ʼ ವಂಚನೆ: 2024ರ ಮೊದಲ 3 ತಿಂಗಳಲ್ಲೇ 120 ಕೋಟಿ ರೂ. ಕಳೆದುಕೊಂಡ ಭಾರತೀಯರು!

Update: 2024-10-28 07:12 GMT

ಸಾಂದರ್ಭಿಕ ಚಿತ್ರ (credit: Meta AI)

ಹೊಸದಿಲ್ಲಿ: ʼಡಿಜಿಟಲ್ ಅರೆಸ್ಟ್ʼ ವಂಚನೆಗೆ ಗುರಿಯಾಗಿ 2024ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯರು 120.30ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ಸೈಬರ್ ಕ್ರೈಮ್ ದತ್ತಾಂಶ ತೋರಿಸಿದೆ.

ಕೇಂದ್ರ ಮಟ್ಟದಲ್ಲಿ ಸೈಬರ್ ಅಪರಾಧವನ್ನು ಮೇಲ್ವಿಚಾರಣೆ ಮಾಡುವ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮಾಹಿತಿ ಪ್ರಕಾರ, ʼಡಿಜಿಟಲ್ ಅರೆಸ್ಟ್ʼ ಡಿಜಿಟಲ್ ವಂಚನೆಯ ಪ್ರಚಲಿತ ವಿಧಾನವಾಗಿದೆ. ಈ ವಂಚನೆಗಳನ್ನು ನಡೆಸುತ್ತಿರುವವರಲ್ಲಿ ಅನೇಕರು ಆಗ್ನೇಯ ಏಷ್ಯಾದ ದೇಶಗಳಾದ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದಲ್ಲಿ ನೆಲೆಸಿದ್ದಾರೆ.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಜನವರಿಯಿಂದ ಎಪ್ರಿಲ್ ವರೆಗಿನ ಅಂಕಿ-ಅಂಶವನ್ನು ವಿಶ್ಲೇಷಣೆ ನಡೆಸಿದಾಗ, ಈ ಅವಧಿಯಲ್ಲಿ 46% ಸೈಬರ್ ವಂಚನೆಗಳು ನಡೆದಿರುವುದನ್ನು ಪತ್ತೆ ಹಚ್ಚಿದೆ. ಈ ಅವಧಿಯಲ್ಲಿ ಸಂತ್ರಸ್ತರು ಒಟ್ಟು 1,776 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.

ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್(ಎನ್ಸಿಆರ್ಪಿ) ದತ್ತಾಂಶದ ಪ್ರಕಾರ, 2024ರ ಜನವರಿ 1ರಿಂದ ಎಪ್ರಿಲ್ 30ರ ನಡುವೆ ಈ ಬಗ್ಗೆ 7.4 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. 2023ರಲ್ಲಿ 15.56 ಲಕ್ಷ ದೂರುಗಳನ್ನು ಸ್ವೀಕರಿಸಿದೆ. 2022ರಲ್ಲಿ ಒಟ್ಟು 9.66 ಲಕ್ಷ ದೂರುಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದೆ.

I4C ಪ್ರಕಾರ, ಡಿಜಿಟಲ್ ಅರೆಸ್ಟ್, ಟ್ರೇಡಿಂಗ್ ಹಗರಣ, ಹೂಡಿಕೆ ಹಗರಣ ಮತ್ತು ಡೇಟಿಂಗ್ ಆಪ್ ಸ್ಕ್ಯಾಮ್ ಡಿಜಿಟಲ್‌ ವಂಚನೆಯಲ್ಲಿ ಸೇರಿದೆ. ಡಿಜಿಟಲ್ ಅರೆಸ್ಟ್ ನಲ್ಲಿ ಭಾರತೀಯರು 120.30 ಕೋಟಿ ರೂ, ಟ್ರೇಡಿಂಗ್ ಹಗರಣದಲ್ಲಿ 1,420.48 ಕೋಟಿ ರೂ, ಹೂಡಿಕೆ ಹಗರಣದಲ್ಲಿ 222.58 ಕೋಟಿ ರೂ. ಮತ್ತು ಡೇಟಿಂಗ್ ಆ್ಯಪ್ ಹಗರಣದಲ್ಲಿ13.23 ಕೋಟಿ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಕುಮಾರ್ ಬಿಡುಗಡೆಗೊಳಿಸಿದ ಅಂಕಿ-ಅಂಶವು ಬಹಿರಂಗಪಡಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News