ಭಾರತದ ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ರ‍್ಯಾಂಕಿಂಗ್‌ ನಲ್ಲಿ ಕುಸಿತ

Update: 2023-11-15 16:01 GMT

ಹೊಸದಿಲ್ಲಿ : ಭಾರತದ ಪ್ರತಿಭಾ ಸ್ಪರ್ಧಾತ್ಮಕತೆ ರ‍್ಯಾಂಕಿಂಗ್‌ ಕುಸಿದಿದೆ ಎಂದು ಫ್ರಾನ್ಸ್ನ ವಾಣಿಜ್ಯ ಶಾಲೆ ‘ಇನ್ಸಿಯಡ್’ ಸಿದ್ಧಪಡಿಸುವ ‘ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕ’ ತಿಳಿಸಿದೆ. ಈ ಸೂಚ್ಯಂಕದಲ್ಲಿ, ಭಾರತದ ಸ್ಥಾನವು 2013ರಲ್ಲಿ 103 ದೇಶಗಳ ಪೈಕಿ 83 ಆಗಿದ್ದರೆ, ಈಗ ಅದು 134 ದೇಶಗಳ ಪೈಕಿ 103 ಆಗಿದೆ.

ಈ ಸೂಚ್ಯಂಕದಲ್ಲಿ, ಬ್ರಿಕ್ಸ್ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ದೇಶಗಳ ಪೈಕಿ ಭಾರತ ಕೊನೆಯ ಸ್ಥಾನದಲ್ಲಿದೆ.

ದೇಶಗಳು ಪ್ರತಿಭೆಯನ್ನು ಹೇಗೆ ಬೆಳೆಸುತ್ತವೆ, ಆಕರ್ಷಿಸುತ್ತವೆ ಮತ್ತು ಉಳಿಸಿಕೊಳ್ಳುತ್ತವೆ ಎನ್ನುವುದನ್ನು ಈ ವಾರ್ಷಿಕ ಸೂಚ್ಯಂಕವು ಅಳೆಯುತ್ತದೆ.

ಒಳಬರುವುದು (ಇನ್ಪುಟ್) ಮತ್ತು ಹೊರಹೋಗುವುದು (ಔಟ್ಪುಟ್) ಎಂಬ ಎರಡು ಉಪ ಸೂಚ್ಯಂಕಗಳ ಅಧಾರದಲ್ಲಿ ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕವನ್ನು ಅಳೆಯಲಾಗುತ್ತದೆ. ಇನ್ಪುಟ್ ನಲ್ಲಿ ದೇಶಗಳ ನಿಯಂತ್ರಣ ವ್ಯವಸ್ಥೆ ಮತ್ತು ವಾಣಿಜ್ಯ ಪರಿಸರವನ್ನು ಅಂದಾಜಿಸಲಾಗುತ್ತದೆ ಹಾಗೂ ಈ ದೇಶಗಳು ಪ್ರತಿಭೆಯನ್ನು ಆಕರ್ಷಿಸಲು, ಬೆಳೆಸಲು ಮತ್ತು ಉಳಿಸಿಕೊಳ್ಳಲು ಏನು ಮಾಡುತ್ತವೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಔಟ್ ಪುಟ್ ವಿಭಾಗದಲ್ಲಿ ದೇಶವೊಂದರ ಪ್ರತಿಭೆಯ ಗುಣಮಟ್ಟವನ್ನು ಅಳೆಯಲಾಗುತ್ತದೆ.

ಈ ವರ್ಷದ ವರದಿಯಲ್ಲಿ, ಪ್ರತಿಭಾ ಸ್ಪರ್ಧಾತ್ಮಕತೆಯಲ್ಲಿ ಭಾರತದ ರ‍್ಯಾಂಕಿಂಗ್‌ ಕುಸಿದಿದೆ.

ಬ್ರಿಕ್ಸ್ ದೇಶಗಳ ಪೈಕಿ ಚೀನಾ ಅಗ್ರ ಸ್ಥಾನದಲ್ಲಿದೆ. ಅದು ಸೂಚ್ಯಂಕದಲ್ಲಿ 40ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 52ನೇ ಸ್ಥಾನದಲ್ಲಿರುವ ರಶ್ಯ ಇದೆ. ದಕ್ಷಿಣ ಆಫ್ರಿಕ 68ನೇ ಸ್ಥಾನದಲ್ಲಿದ್ದರೆ, ಬ್ರೆಝಿಲ್ 69ನೇ ಸ್ಥಾನವನ್ನು ಪಡೆದಿದೆ.

ಯುರೋಪಿಯನ್ ದೇಶಗಳು ಅಗ್ರ ಸ್ಥಾನವನ್ನು ಪಡೆದಿವೆ. ಸ್ವಿಟ್ಸರ್ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ ಮತ್ತು ಅಮೆರಿಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News