“ಓರ್ವ ಕ್ರೀಡಾಳುವಾಗಿ ನಾನು ದನಿ ಮಾತ್ರ ಎತ್ತಬಹುದು…”: ಗಾಝಾದಲ್ಲಿ ಪುಟ್ಟ ಮಕ್ಕಳ ಸಾವಿನ ಬಗ್ಗೆ ಇರ್ಫಾನ್ ಪಠಾನ್ ಕಳವಳ
Update: 2023-11-03 11:16 GMT
ಹೊಸದಿಲ್ಲಿ: ಇಸ್ರೇಲ್-ಹಮಾಸ್ ಸಂಘರ್ಷದ ಪರಿಣಾಮವಾಗಿ ನಡೆಯುತ್ತಿರುವ ದಾಳಿಗಳಲ್ಲಿ ಗಾಝಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕೂಡ ಬಲಿಯಾಗುತ್ತಿರುವ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾನ್ ತಮ್ಮ ತೀವ್ರ ಆತಂಕ ತೋಡಿಕೊಂಡಿದ್ದಾರೆ.
ಈ ಗಂಭೀರ ವಿಚಾರ ಕುರಿತಂತೆ ಇರುವ ಮೌನ ತಮಗೆ ನೋವು ತಂದಿದೆ ಎಂದು ಹೇಳಿರುವ ಇರ್ಫಾನ್ ಪಠಾನ್ ಜಗತ್ತಿನ ನಾಯಕರು ಒಗ್ಗಟ್ಟಾಗಿ ಈ ಬರ್ಬರತೆಗೆ ಅಂತ್ಯ ಹಾಡಬೇಕು ಎಂದು ಕೋರಿದ್ದಾರೆ.
“ಪ್ರತಿ ದಿನ ಗಾಝಾದಲ್ಲಿ 0-10 ವಯಸ್ಸಿನ ಮುಗ್ಧ ಮಕ್ಕಳು ಬಲಿಯಾಗುತ್ತಿದ್ದಾರೆ ಮತ್ತು ಜಗತ್ತು ಮೌನವಾಗಿದೆ. ಓರ್ವ ಕ್ರೀಡಾಳುವಾಗಿ ನಾನು ನನ್ನ ದನಿಯನ್ನು ಮಾತ್ರ ಎತ್ತಬಹುದು. ಜಗತ್ತಿನ ನಾಯಕರು ಒಗ್ಗಟ್ಟಾಗಿ ಈ ಅವಿವೇಕದ ಹತ್ಯೆಗಳನ್ನು ಅಂತ್ಯಗೊಳಿಸಬೇಕು,” ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.