ಜ. 31-ಫೆ. 9ರ ನಡುವೆ ಸಂಸತ್ತಿನ ಬಜೆಟ್ ಅಧಿವೇಶನ

Update: 2024-01-11 17:07 GMT

Photo: PTI 

ಹೊಸದಿಲ್ಲಿ: ಸಂಸತ್ತಿನ ಸಂಕ್ಷಿಪ್ತ ಬಜೆಟ್ ಅಧಿವೇಶನ ಜನವರಿ 31 ಹಾಗೂ ಫೆಬ್ರವರಿ 9ರ ನಡುವೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಜನವರಿ 11ರಂದು ತಿಳಿಸಿವೆ.

ಜನವರಿ 31ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಲಿದ್ದಾರೆ.

ಸರಕಾರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆ ಇದೆ. ಹೊಸ ಸರಕಾರ ಅನಂತರ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಲಿದೆ. 17ನೇ ಲೋಕಸಭೆಯ ಅವಧಿ ಜೂನ್ 16ರಂದು ಕೊನೆಗೊಳ್ಳುವುದರಿಂದ ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ನಡೆಯಲಿರುವ ಸಂಸತ್ತಿನ ಕೊನೆಯ ಅಧಿವೇಶನ ಇದಾಗಲಿದೆ.

2019ರಲ್ಲಿ ಲೋಕಸಭೆ ಚುನಾವಣೆಯನ್ನು ಮಾರ್ಚ್ 10ರಂದು ಘೋಷಿಸಲಾಗಿತ್ತು. ಮತದಾನವನ್ನು ಎಪ್ರಿಲ್ 11 ಹಾಗೂ ಮೇ 19ರ ನಡುವೆ 7 ಹಂತಗಳಲ್ಲಿ ನಡೆಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News