ಜೈಶಂಕರ್ ಭದ್ರತೆ ‘ಝಡ್’ ದರ್ಜೆಗೆ ಏರಿಕೆ
Update: 2023-10-12 18:39 GMT
ಹೊಸದಿಲ್ಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್‌ರ ಭದ್ರತೆಯನ್ನು ‘ಝಡ್’ ದರ್ಜೆಗೆ ಏರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವ ಮೂಲಗಳು ತಿಳಿಸಿವೆ.
ಇದಕ್ಕಿಂತಲೂ ಮೊದಲು ಜೈಶಂಕರ್‌ಗೆ ‘ವೈ’ ದರ್ಜೆಯ ಭದ್ರತೆಯನ್ನು ನೀಡಲಾಗಿತ್ತು. ಅವರಿಗೆ ಬೆದರಿಕೆ ಇರುವ ಬಗ್ಗೆ ಇಂಟಲಿಜನ್ಸ್ ಬ್ಯೂರೋ ನೀಡಿರುವ ವರದಿಯ ಆಧಾರದಲ್ಲಿ ಭದ್ರತೆಯನ್ನು ಈ ಹೆಚ್ಚಳವನ್ನು ಮಾಡಲಾಗಿದೆ.
‘ಝಡ್’ ದರ್ಜೆಯ ಭದ್ರತೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸೇರಿದಂತೆ ಒಟ್ಟು 36 ಭದ್ರತಾ ಸಿಬ್ಬಂದಿ ಇರುತ್ತಾರೆ. ಅದಕ್ಕೆ ಹೆಚ್ಚುವರಿಯಾಗಿ, ಸಚಿವರ ನಿವಾಸದಲ್ಲಿ 12 ಸಶಸ್ತ್ರ ಕಾವಲುಗಾರರನ್ನು ನೇಮಿಸಲಾಗುತ್ತದೆ. ಆರು ಮಂದಿ ಖಾಸಗಿ ಭದ್ರತಾ ಅಧಿಕಾರಿಗಳು, ಮೂರು ಪಾಳಿಗಳಲ್ಲಿ 12 ಸಶಸ್ತ್ರ ಎಸ್ಕಾರ್ಟ್ ಕಮಾಂಡೊಗಳು, ಪಾಳಿಗೊಂದರಂತೆ ಕಾವಲುಗಾರರು ಮತ್ತು 24 ಗಂಟೆಯೂ ಮೂವರು ಚಾಲಕರು ಇರುತ್ತಾರೆ.