ಜ್ಞಾನವಾಪಿ ತೀರ್ಪು ಪ್ರಕಟಿಸಿದ್ದ ನ್ಯಾಯಾಧೀಶರನ್ನು ಸರ್ಕಾರಿ ವಿವಿಯ ಲೋಕಪಾಲ್‌ ಆಗಿ ನೇಮಿಸಿದ ಉತ್ತರ ಪ್ರದೇಶ ಸರ್ಕಾರ

Update: 2024-02-29 11:11 GMT

Photo: X/@LiveLawIndia

ಹೊಸದಿಲ್ಲಿ: ತಮ್ಮ ಕರ್ತವ್ಯದ ಕೊನೆಯ ದಿನವಾದ ಜನವರಿ 31ರಂದು ಜ್ಞಾನವಾಪಿ ಮಸೀದಿಯ ವ್ಯಾಸ್‌ ತೆಹಖಾನದೊಲಗೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದ ಹಾಗೂ ಅದೇ ದಿನ ನಿವೃತ್ತರಾದ ಜಿಲ್ಲಾ ನ್ಯಾಯಾಧೀಶ ವಾರಣಾಸಿ ಎ ಕೆ ವಿಶ್ವೇಶ ಅವರನ್ನು ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ಡಾ. ಶಕುಂತಳಾ ಮಿಶ್ರಾ ನ್ಯಾಷನಲ್‌ ರಿಹ್ಯಾಬಿಲಿಟೇಶನ್‌ ಯುನಿವರ್ಸಿಟಿ, ಲಕ್ನೋ ಇಲ್ಲಿನ ಲೋಕ್‌ಪಾಲ್‌ ಆಗಿ ಸರ್ಕಾರ ನೇಮಿಸಿದೆ.

ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಈ ವಿಶ್ವವಿದ್ಯಾಲಯದ ಓಂಬಡ್ಸ್‌ಮ್ಯಾನ್‌ ಆಗಿ ನಿವೃತ್ತ ನ್ಯಾಯಾಧೀಶ ವಿಶ್ವೇಶ ಕಾರ್ಯನಿರ್ವಹಿಸಲಿದ್ದು ಮೂರು ವರ್ಷ ಅವಧಿಯ ತನಕ ಈ ಹುದ್ದೆಯಲ್ಲಿರಲಿದ್ದಾರೆ.

ಅವರ ನೇಮಕಾತಿಯನ್ನು ಯುಜಿಸಿ ನಿಬಂಧನೆಗಳನ್ವಯ ಮಾಡಲಾಗಿದ್ದು ಇದರ ಪ್ರಕಾರ ವಿವಿಗಳು ವಿದ್ಯಾರ್ಥಿಗಳ ದೂರುಗಳ ಪರಿಹಾರಕ್ಕೆ ಓಂಬಡ್ಸ್‌ಮ್ಯಾನ್‌ ನೇಮಕ ಮಾಡಬೇಕಿದೆ. ಯುಜಿಸಿ ಸುತ್ತೋಲೆ ಪ್ರಕಾರ ಲೋಕಪಾಲ್‌ ಹುದ್ದೆಗೆ ನೇಮಕಗೊಳ್ಳುವವರು ನಿವೃತ್ತ ಉಪಕುಲಪತಿ, ನಿವೃತ್ತ ಪ್ರೊಫೆಸರ್‌ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News