ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಸೋಲಿಗೆ ಹಾಲಿವುಡ್ ತಾರೆಯರು ಕಾರಣ ಎಂದ ಕಂಗನಾ ರಣಾವತ್!

Update: 2024-11-07 17:03 IST
Photo of Kangana Ranaut ,  Kamala Harris

ಕಂಗನಾ ರಣಾವತ್ , ಕಮಲಾ ಹ್ಯಾರಿಸ್ | PTI 

  • whatsapp icon

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಪರಾಭವಗೊಂಡ ಬೆನ್ನಿಗೇ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಕಮಲಾ ಹ್ಯಾರಿಸ್ ರನ್ನು ಬೆಂಬಲಿಸಿದ್ದ ಹಾಲಿವುಡ್ ತಾರೆಯರಾದ ಟೇಲರ್ ಸ್ವಿಫ್ಟ್, ಬೆಯಾನ್ಸ್, ಜೆನ್ನಿಫರ್ ಲೋಪೆಝ್, ಅರಿಯಾನ ಗ್ರಾಂಡೆ, ಬಿಲ್ಲಿ ಎಲ್ಲಿಶ್, ಲೇಡಿ ಗಾಗಾ, ಹ್ಯಾರಿಸನ್ ಫೋರ್ಡ್, ಅರ್ನಾಲ್ಡ್ ಶ್ವಾರ್ಝನೆಗ್ಗರ್ ಹಾಗೂ ಇನ್ನಿತರ ಕಲಾವಿದರನ್ನು ವಿದೂಷಕರು ಎಂದು ಮೂದಲಿಸಿದ್ದಾರೆ.

ಈ ತಾರೆಯರೆಲ್ಲ ಕಮಲಾ ಹ್ಯಾರಿಸ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆಯೆ, ಜನರು ಆಕೆ ಕೂಡಾ ಇವರಂತೆ ವಿಶ್ವಾಸಕ್ಕೆ ಅರ್ಹರಲ್ಲ ಎಂದು ಭಾವಿಸಿದರು ಎಂದು ಅವರು ಜರಿದಿದ್ದಾರೆ.

“ನಿಮಗೆ ಗೊತ್ತೆ? ವಿದೂಷಕರು ಕಮಲಾ ಹ್ಯಾರಿಸ್ ಗೆ ಬೆಂಬಲ ಸೂಚಿಸುತ್ತಿದ್ದಂತೆಯೆ ಅವರ ಸೂಚ್ಯಂಕವು ಕೆಳಗಿಳಿಯಿತು. ಜನರು ಆಕೆ ಕೂಡಾ ಇವರಂತೆಯೆ ಕ್ಷುಲ್ಲಕ ಮತ್ತು ವಿಶ್ವಾಸಕ್ಕೆ ಅನರ್ಹ ಎಂದು ಭಾವಿಸಿದರು” ಎಂದು ಬರೆದುಕೊಂಡಿದ್ದಾರೆ.

ಈ ನಡುವೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News