ಕೇರಳ | ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ

Update: 2024-02-09 16:31 GMT

ಸಾಂದರ್ಭಿಕ ಚಿತ್ರ

ಕೊಚ್ಚಿ : ಕೇರಳದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸಿದ್ದ ವ್ಯಕ್ತಿಗೆ ಇಲ್ಲಿಯ ವಿಶೇಷ ಎನ್ಐಎ ನ್ಯಾಯಾಲಯವು ಶುಕ್ರವಾರ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.

ಭಯೋತ್ಪಾದಕ ಸಂಘಟನೆ ಐಸಿಸ್ ಗಾಗಿ ನೇಮಕಾತಿಗಳಿಗೆ ಪ್ರಯತ್ನಿಸಿದ್ದಕ್ಕಾಗಿ ಮತ್ತು ಕೇರಳದಲ್ಲಿ ದಾಳಿಗಳನ್ನು ಯೋಜಿಸಿದ್ದಕ್ಕಾಗಿ ರಿಯಾಸ್ ಅಬೂಬಕರ್ ದೋಷಿಯೆಂದು ಈ ವಾರದ ಪೂರ್ವಾರ್ಧದಲ್ಲಿ ನ್ಯಾಯಾಲಯವು ತೀರ್ಪು ನೀಡಿತ್ತು.

ಕಾಸರಗೋಡಿನಲ್ಲಿ ಐಸಿಸ್ ನ ಸುಪ್ತ ಘಟಕ ಮತ್ತು ಜಿಲ್ಲೆಯಿಂದ ಸುಮಾರು 15 ಜನರ ಕಣ್ಮರೆ ಕುರಿತು ತನ್ನ ತನಿಖೆಯ ಭಾಗವಾಗಿ ಎನ್ಐಎ 2018ರಲ್ಲಿ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ಅಬೂಬಕರ್ನನ್ನು ಬಂಧಿಸಿತ್ತು. ಕಣ್ಮರೆಯಾಗಿರುವ ಈ 15 ಜನರು ಭಯೋತ್ಪಾದಕ ಗುಂಪನ್ನು ಸೇರಲು ವಲಸೆ ಹೋಗಿದ್ದಾರೆ ಎನ್ನಲಾಗಿದೆ.

ಅಬೂಬಕರ್ ಈಗಾಗಲೇ ಜೈಲಿನಲ್ಲಿ ಕಳೆದಿರುವ ಸಮಯವನ್ನು ಶಿಕ್ಷೆಯ ಅವಧಿಯಲ್ಲಿ ಸರಿದೂಗಿಸುವಂತೆ ನ್ಯಾಯಾಲಯವು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News