ಕೇರಳ: ಅಬ್ದುಲ್ ನಾಸಿರ್ ಮದನಿಗೆ ಮುಂದುವರಿದ ಚಿಕಿತ್ಸೆ
Update: 2024-12-21 11:36 GMT
ಕೇರಳ: ಅನಾರೋಗ್ಯದಿಂದ ಬಳಲುತ್ತಿರುವ ಪಿಡಿಪಿ ಮುಖ್ಯಸ್ಥ ಅಬ್ದುಲ್ ನಾಸಿರ್ ಮದನಿ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ ಎಂದು ವರದಿಯಾಗಿದೆ.
ರಕ್ತದೊತ್ತಡ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅವರನ್ನು ಕೊಚ್ಚಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದೊತ್ತಡದಲ್ಲಿ ನಿರಂತರ ಏರಿಳಿತ, ಉಸಿರಾಟದ ತೊಂದರೆ, ತಲೆನೋವು ಸೇರಿದಂತೆ ಅನಾರೋಗ್ಯದಿಂದ ನಾಸಿರ್ ಮದನಿ ಬಳಲುತ್ತಿದ್ದಾರೆ.
ಸದ್ಯ ಮದನಿ ಆರೋಗ್ಯದ ಮೇಲೆ ತಜ್ಞ ವೈದ್ಯರ ತಂಡ ನಿಗಾ ಇರಿಸಿಕೊಂಡಿದೆ ಎಂದು ತಿಳಿದು ಬಂದಿದೆ.