ಕೇರಳ: ಆಟವಾಡುವಾಗ ಕುತ್ತಿಗೆಗೆ ಶಾಲು ಸಿಲುಕಿಕೊಂಡು ಬಾಲಕಿ ಮೃತ್ಯು
Update: 2024-08-13 13:12 GMT
ತ್ರಿಶೂರ್: ತನ್ನ ನಿವಾಸದಲ್ಲಿ ಆಟವಾಡುವಾಗ ಕುತ್ತಿಗೆಗೆ ಶಾಲು ಸಿಲುಕಿಕೊಂಡು 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ತ್ರಿಶೂರ್ ಜಿಲ್ಲೆಯ ಚೆಲಕ್ಕರ ಗ್ರಾಮದಲ್ಲಿ ನಡೆದಿದೆ.
ಕುಟುಂಬದ ಸದಸ್ಯರ ಪ್ರಕಾರ, ಕಿಟಕಿಯ ಬಳಿ ಶಾಲಿನೊಂದಿಗೆ ಆಟವಾಡುವಾಗ, ಅದು ಆಕೆಯ ಕುತ್ತಿಗೆಗೆ ಆಕಸ್ಮಿಕವಾಗಿ ಸಿಕ್ಕಿಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ, ಆಕೆಯನ್ನು ಬದುಕುಳಿಸಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.