ಕೊಲ್ಕತ್ತಾ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ವೈದ್ಯರ ಪ್ರತಿಭಟನೆಯ ನಡುವೆ ಮೆಡಿಕಲ್‌ ಕಾಲೇಜು ಪ್ರಾಂಶುಪಾಲ ರಾಜೀನಾಮೆ

Update: 2024-08-12 11:29 GMT

PC : NDTV

ಕೊಲ್ಕತ್ತಾ: ಕೊಲ್ಕತ್ತಾದ ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ 31 ವರ್ಷದ ಜೂನಿಯರ್‌ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ವೈದ್ಯರ ಪ್ರತಿಭಟನೆಗಳ ನಡುವೆ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ ಸಂದೀಪ್‌ ಘೋಷ್‌ ತಮ್ಮ ಹುದ್ದೆಗೆ ಹಾಗೂ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾನಹಾನಿಗೈಯ್ಯಲಾಗುತ್ತಿದೆ. ಮೃತ ವೈದ್ಯೆ ನನ್ನ ಪುತ್ರಿಯಂತೆ ಇದ್ದರು. ಓರ್ವ ಹೆತ್ತವನಾಗಿ, ನಾನು ರಾಜೀನಾಮೆ ನೀಡುತ್ತಿದ್ದೇನೆ…ಯಾರಿಗೂ ಈ ರೀತಿ ಭವಿಷ್ಯದಲ್ಲಿ ಆಗುವುದು ನನಗೆ ಬೇಕಿಲ್ಲ,” ಎಂದು ಅವರು ಹೇಳಿದರು.

ಆಸ್ಪತ್ರೆಯ ಸಿಬ್ಬಂದಿಗೆ ಸೂಕ್ತ ರಕ್ಷಣೆಯೊದಗಿಸಲು ವಿಫಲರಾಗಿದ್ದಾರೆಂದು ಆರೋಪಿಸಿ ಅವರ ಅಮಾನತಿಗೆ ಪ್ರತಿಭಟನಾನಿರತ ವೈದ್ಯರು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಘಟನೆ ನಡೆದ ರಾತ್ರಿ ಕರ್ತವ್ಯದಲ್ಲಿದ್ದ ಮೂವರು ಕಿರಿಯ ವೈದ್ಯರು ಹಾಗೂ ಓರ್ವ ಆಸ್ಪತ್ರೆ ಸಿಬ್ಬಂದಿಯನ್ನು ಪೊಲೀಸರು ಇಂದು ವಿಚಾರಣೆಗೆ ಬರ ಹೇಳಿದ್ದಾರೆ.

ಪೊಲೀಸರು ಈ ಪ್ರಕರಣ ಸಂಬಂಧ ಈಗಾಗಲೇ ಸಂಜಯ್‌ ರಾಯ್‌ ಎಂಬಾತನನ್ನು ಬಂಧಿಸಿದ್ದಾರೆ.,

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News