ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

Update: 2024-02-18 17:30 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಜಸ್ಥಾನದ ಕೋಟಾದಲ್ಲಿ ಶನಿವಾರ ಬೆಳಗ್ಗೆ ಸುಮಾರು 7 ಗಂಟೆಗೆ ತರಬೇತಿ ಕೇಂದ್ರಕ್ಕೆ ತೆರಳಿದ್ದ ನೀಟ್ ಆಕಾಂಕ್ಷಿಯೋರ್ವ ನಾಪತ್ತೆಯಾಗಿದ್ದಾನೆ.

ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಯುವರಾಜ್ (18) ಎಂದು ಗುರುತಿಸಲಾಗಿದೆ. ಈತ ಸಿಕಾರ್ ಜಿಲ್ಲೆಯ ನಿವಾಸಿ. ಪ್ರಸಕ್ತ ಖಾಸಗಿ ತರಬೇತಿ ಕೇಂದ್ರದಲ್ಲಿ ನೀಟ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ.

ಯುವರಾಜ ಬೆಳಗ್ಗೆ 7 ಗಂಟೆಗೆ ತನ್ನ ತರಬೇತಿ ಕೇಂದ್ರ ತಲುಪಲು ಶನಿವಾರ ಟ್ರಾನ್ಸ್ಪೋರ್ಟ್ ನಗರ ಪ್ರದೇಶದಲ್ಲಿರುವ ತನ್ನ ಹಾಸ್ಟೆಲ್ನಿಂದ ತೆರಳಿದ್ದ. ಅನಂತರ ಆತ ನಾಪತ್ತೆಯಾಗಿದ್ದಾನೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವಾಗಿರುವ ಕೋಟಾದಿಂದ ಮಧ್ಯಪ್ರದೇಶದ ನಿವಾಸಿಯಾಗಿರುವ ವಿದ್ಯಾರ್ಥಿ ರಚಿತ್ ಸೊಂಧ್ಯಾ ನಾಪತ್ತೆಯಾದ ಕೇವಲ ಒಂದು ವಾರದ ಬಳಿಕ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News