ಕುನೊ ರಾಷ್ಟ್ರೀಯ ಉದ್ಯಾನ: 6 ಚೀತಾಗಳ ರೇಡಿಯೊ ಕಾಲರ್ ತೆಗೆದ ಅರಣ್ಯಾಧಿಕಾರಿಗಳು

Update: 2023-07-24 17:03 GMT

Photo: PTI 

ಭೋಪಾಲ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದ ಪಶುವೈದ್ಯರು ಹಾಗೂ ನಮಿಬಿಯಾ, ದಕ್ಷಿಣ ಆಫ್ರಿಕಾದ ತಜ್ಞರು ಚೀತಾಗಳ ಆರೋಗ್ಯ ಪರಿಶೀಲನೆ ನಡೆಸಲಿರುವುದರಿಂದ ಉದ್ಯಾನದಲ್ಲಿರುವ 6 ಚೀತಾಗಳ ರೇಡಿಯೊ ಕಾಲರ್ ಅನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಯೊಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ವರ್ಷ ಮಾರ್ಚ್ ನಿಂದ ಐದು ಚೀತಾಗಳು ಹಾಗೂ ಮೂರು ಮರಿ ಚೀತಾಗಳು ಸಾವನ್ನಪ್ಪಿವೆ. ಈಗ ಒಟ್ಟು 11 ಚೀತಾ (6 ಗಂಡು ಹಾಗೂ 5 ಹೆಣ್ಣು)ಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಕುನೊ ರಾಷ್ಟ್ರೀಯ ಉದ್ಯಾನದ ಪಶು ವೈದ್ಯರು ಹಾಗೂ ನಮಿಬಿಯಾ, ದಕ್ಷಿಣ ಆಫ್ರಿಕಾದ ತಜ್ಞರು ಆರೋಗ್ಯ ಪರಿಶೀಲನೆಯ ನೆಲೆಗಟ್ಟಿನಲ್ಲಿ ಇದುವರೆಗೆ 6 ಚೀತಾಗಳ ರೇಡಿಯೊ ಕಾಲರ್ ಅನ್ನು ತೆಗೆದಿದ್ದಾರೆೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೇಡಿಯೊ ಕಾಲರ್ ಅನ್ನು ತೆಗೆಯಲಾದ ಚೀತಾಗಳನ್ನು ಗೌರವ್, ಶೌರ್ಯ, ಪವನ್, ಪಾವಕ್, ಆಶಾ ಹಾಗೂ ಧೀರಾ ಎಂದು ಗುರುತಿಸಲಾಗಿದೆ. ಈ ಎಲ್ಲಾ ಚೀತಾಗಳು ಆರೋಗ್ಯಯುತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುನೊದ ಪಶು ವೈದ್ಯರ ತಂಡ ಹಾಗೂ ನಮಿಬಿಯಾ, ದಕ್ಷಿಣ ಆಫ್ರಿಕಾದ ತಜ್ಞರಿಂದ ಆರೋಗ್ಯ ಪರಿಶೀಲನೆ ನಡೆಸುವ ಉದ್ದೇಶದಿಂದ 6 ಚೀತಾಗಳ ರೇಡಿಯೊ ಕಾಲರ್ ಅನ್ನು ತೆಗೆಯಲಾಗಿದೆ ಎಂದು ಜುಲೈ 22ರಂದು ಜಾರಿಗೊಳಿಸಲಾದ ಅಧಿಕೃತ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News