ಹೇಮಾ ಸಮಿತಿ ವರದಿ| ಅತ್ಯಾಚಾರ ಆರೋಪ ಎದುರಿಸಿದ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿಲ್ಲ: ಮುಕೇಶ್‌ ಬೆಂಬಲಕ್ಕೆ ನಿಂತ LDF

Update: 2024-08-29 07:01 GMT

ನಟ, ಶಾಸಕ ಎಂ.ಮುಕೇಶ್ (Photo: Facebook)

ತಿರುವನಂತಪುರಂ: ಕೇರಳದ ಆಡಳಿತಾರೂಢ ಎಲ್‌ಡಿಎಫ್ ಗುರುವಾರ ಅತ್ಯಾಚಾರ ಪ್ರಕರಣದಲ್ಲಿ ದಾಖಲಾಗಿರುವ ಸಿಪಿಐ(ಎಂ) ನಟ, ಶಾಸಕ ಎಂ.ಮುಕೇಶ್ ಅವರಿಗೆ ಬೆಂಬಲ ನೀಡಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಬ್ಬರು ಕಾಂಗ್ರೆಸ್ ಶಾಸಕರು ಮೊದಲು ರಾಜೀನಾಮೆ ನೀಡಬೇಕು ಎಂದು ಹೇಳಿದೆ.

ಬೆಂಬಲ ವ್ಯಕ್ತಪಡಿಸಿರುವುದು ಕೇವಲ ರಾಜೀನಾಮೆ ನೀಡದಂತೆ ಮಾತ್ರ. ಅವರ ವಿರುದ್ಧದ ಆರೋಪದ ಬಗ್ಗೆ ಅಲ್ಲ. ಮಲಯಾಳಂ ಚಿತ್ರರಂಗದ ನಟರು ಮತ್ತು ನಿರ್ದೇಶಕರ ವಿರುದ್ಧದ ಆರೋಪಗಳ ಮೇಲೆ ದಾಖಲಾಗಿರುವ ಯಾವುದೇ ಪ್ರಕರಣಗಳಲ್ಲಿ ಸಿಪಿಐ(ಎಂ) ಅಥವಾ ಎಲ್ ಡಿ ಎಫ್ ಸರ್ಕಾರವು ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಎಂದು ಎಲ್‌ಡಿಎಫ್ ಸಂಚಾಲಕ ಇ ಪಿ ಜಯರಾಜನ್ ಹೇಳಿದ್ದಾರೆ.

ಮುಕೇಶ್ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬ ಸುದ್ದಿಗಾರರ ಪ್ರಶ್ನೆಗೆ ಜಯರಾಜನ್ ಪ್ರತಿಕ್ರಿಯಿಸಿದರು.

ಈ ಹಿಂದೆ, ಕಾಂಗ್ರೆಸ್ ಶಾಸಕರಾದ ಎಂ ವಿನ್ಸೆಂಟ್ ಮತ್ತು ಎಲ್ದೋಸ್ ಕುನ್ನಪ್ಪಿಳ್ಳಿ ಅವರ ವಿರುದ್ಧ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅವರು ರಾಜೀನಾಮೆ ನೀಡಿಲ್ಲ. ಕಾನೂನು ಎಲ್ಲಾ ಶಾಸಕರಿಗೂ ಸಮಾನವಾಗಿ ಅನ್ವಯಿಸುತ್ತದೆ. ಮುಕೇಶ್ ರಾಜೀನಾಮೆ ಕೇಳುವ ಮೂಲಕ ನೀವು ಉಳಿದ ಇಬ್ಬರನ್ನು ರಕ್ಷಿಸುತ್ತಿದ್ದೀರಿ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News