ಭಾರತದ ನೂತನ ಬ್ರಿಟಿಷ್‌ ರಾಯಭಾರಿಯಾಗಿ ಲಿಂಡಿ ಕ್ಯಾಮರೂನ್ ನೇಮಕ

Update: 2024-04-11 15:22 GMT

ಲಿಂಡಿ ಕ್ಯಾಮರೂನ್ | PC : NDTV 

ಹೊಸದಿಲ್ಲಿ : ಭಾರತಕ್ಕೆ ತನ್ನ ನೂತನ ರಾಯಭಾರಿಯಾಗಿ ಲಿಂಡಿ ಕ್ಯಾಮರೂನ್ ಅವರನ್ನು ಬ್ರಿಟನ್ ಗುರುವಾರ ನೇಮಕಗೊಳಿಸಿದೆ. ಭಾರತದಲ್ಲಿನ ಹಾಲಿ ಬ್ರಿಟನ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಸಿಎಂಜಿ ಅವರನ್ನು ಇನ್ನೊಂದು ರಾಜತಾಂತ್ರಿಕ ನೇಮಕಾತಿಗಾಗಿ ವರ್ಗಾವಣೆಗೊಳಿಸಲಾಗಿದ್ದು, ಅವರ ಉತ್ತರಾಧಿಕಾರಿಯಾಗಿ ಮಹಿಳೆ ಲಿಂಡಿ ಕ್ಯಾಮರೂನ್ ಅವರ ನೇಮಕವಾಗಿದೆ ಎಂದು ಹೊಸದಿಲ್ಲಿಯಲ್ಲಿನ ಬ್ರಿಟಿಷ್‌ ಹೈಕಮೀಶನ್ ಕಚೇರಿಯ ಪ್ರಕಟಣೆ ತಿಳಿಸಿದೆ.

ಲಿಂಡಿ ಕ್ಯಾಮರೂನ್ ಅವರು 2020 ರಿಂದೀಚೆಗೆ ಬ್ರಿಟನ್‌ನ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕೆ ಬ್ರಿಟನ್‌ನ ಉತ್ತರ ಐಯರ್‌ಲ್ಯಾಂಡ್ ಕಚೇರಿಯ ಮಾಹನಿರ್ದೇಶಕಿಯಾಗಿಯಾಗಿ ಕಾರ್ಯನಿರ್ವಹಿಸಿದ್ದರು. ಈ ತಿಂಗಳಲ್ಲಿ ಭಾರತದ ನೂತನ ಬ್ರಿಟಿಷ್‌ ರಾಯಭಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಎಂದು ಹೈಕಮೀಶನ್ ಕಚೇರಿ ತಿಳಿಸಿದೆ.

ಉಭಯದೇಶಗಳ ನಡುವೆ ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ಮುಕ್ತ ವಾಣಿಜ್ಯ ಮಾತುಕತೆಗಳಲ್ಲಿ ಬ್ರಿಟನ್ ಹಾಗೂ ಭಾರತ ಪರಸ್ಪರ ತೊಡಗಿಕೊಂಡಿರುವ ಸಂದರ್ಭದಲ್ಲೇ ಲಿಂಡಿ ಕ್ಯಾಮರೂನ್ ಅವರ ನೇಮಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News