ಜಾರ್ಖಂಡ್: 400ಕ್ಕೂ ಅಧಿಕ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

Update: 2024-06-01 17:05 GMT

Credit: PTI Photo

ಧುಮ್ಕಾ: ಇಲ್ಲಿ ಕಲ್ಲಿದ್ದಲು ವಿಲೇವಾರಿ ಪ್ರದೇಶ ನಿರ್ಮಾಣದ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಲು ಧುಮ್ಕಾ ಜಿಲ್ಲೆಯ ಗ್ರಾಮವೊಂದರ 400ಕ್ಕೂ ಅಧಿಕ ಜನರು ಶನಿವಾರ ನಡೆದ ಲೋಕಸಭೆ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನವನ್ನು ಬಹಿಷ್ಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಮ್ಕಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಬಾಗ್ದುಭಿ ಗ್ರಾಮದ ಮತಗಟ್ಟೆ ಸಂಖ್ಯೆ 94ರಲ್ಲಿ ಒಟ್ಟು 426ಕ್ಕೂ ಅಧಿಕ ಮತದಾರರು ತಮ್ಮ ಮತ ಚಲಾಯಿಸಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮತಗಟ್ಟೆಯಲ್ಲಿ ನೋಂದಾಯಿತರಾದ 430 ಮತದಾರರ ಪೈಕಿ ಕೇವಲ ನಾಲ್ವರು ಮಾತ್ರ ಮತ ಚಲಾಯಿಸಿದ್ದಾರೆ ಎಂದು ದುಮ್ಕಾ ಸರ್ಕಲ್ ಅಧಿಕಾರಿ ಅಮರ್ ಕುಮಾರ್ ತಿಳಿಸಿದ್ದಾರೆ.

ರೈಲ್ವೇ ಕಲ್ಲಿದ್ದಲು ವಿಲೇವಾರಿ ಪ್ರದೇಶ ನಿರ್ಮಾಣ ಮಾಡುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಅವರೊಂದಿಗೆ ಸಭೆ ನಡೆಸಲಾಗಿದ್ದು, ಈ ವಿಷಯದ ಕುರಿತು ಉನ್ನತ ಅಧಿಕಾರಿಗಳಲ್ಲಿ ಪ್ರಸ್ತಾವಿಸಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿತ್ತು. ಆದರೂ ಅವರು ಮತ ಚಲಾಯಿಸಿಲ್ಲ ಎಂದು ಉಪ ವಿಭಾಗೀಯ ಅಧಿಕಾರಿ ಅಜಯ್ ಕುಮಾರ್ ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News