ಮಧ್ಯಪ್ರದೇಶ : ಬಿಜೆಪಿಯಿಂದ 100 ರೂ.ಗೆ 100 ಯೂನಿಟ್ ವಿದ್ಯುತ್ ಭರವಸೆ

Update: 2023-11-11 15:30 GMT

ಭೋಪಾಲ: ಬಿಜೆಪಿಯು ಮಧ್ಯಪ್ರದೇಶಕ್ಕಾಗಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದೆ. ವಿದ್ಯುತ್ ಮತ್ತು ಅನಿಲ ಸಿಲಿಂಡರ್‌ಗಳಂತಹ ಮಾಮೂಲು ಭರವಸೆಗಳ ಜೊತೆಗೆ ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ಏರಿಕೆ ಮತ್ತು ಆರೋಗ್ಯ ರಕ್ಷಣೆ ಮೂಲಸೌಕರ್ಯ ಕ್ಷೇತ್ರದಲ್ಲಿ 20,000 ಕೋ.ರೂ.ಗಳ ಹೂಡಿಕೆಗೂ ಅದು ಆದ್ಯತೆಯನ್ನು ನೀಡಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಇಲ್ಲಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯಲ್ಲಿನ ಐದು ಪ್ರಮುಖ ಭರವಸೆಗಳು:

► ಪ್ರತಿ ಮನೆಗೆ 100 ರೂ.ಗಳಲ್ಲಿ 100 ಯೂನಿಟ್ ವಿದ್ಯುತ್ ಪೂರೈಕೆ

► ಉಜ್ವಲಾ ಮತ್ತು ಲಾಡ್ಲಿ ಬೆಹನಾ ಯೋಜನೆಗಳ ಫಲಾನುಭವಿಗಳಿಗೆ 450 ರೂ.ಗಳಲ್ಲಿ ಎಲ್‌ಪಿಜಿ ಸಿಲಿಂಡರ್. ಲಾಡ್ಲಿ ಬೆಹನಾ ಯೋಜನೆಯಡಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 1,250 ರೂ.ಜಮಾ

► ಬಡ ಕುಟುಂಬಗಳ ಬಾಲಕಿಯರು ತಮ್ಮ ಸ್ನಾತಕೋತ್ತರ ಕೋರ್ಸ್ ಪೂರ್ಣಗೊಳಿಸುವವರೆಗೆ ಉಚಿತ ಶಿಕ್ಷಣ

► ರೈತರಿಂದ ಪ್ರತಿ ಕ್ವಿಂಟಲ್ ಗೋದಿ 2,700 ರೂ.ಗೆ ಮತ್ತು ಭತ್ತ 3,100 ರೂ.ಗೆ ಖರೀದಿ

► ಆರೋಗ್ಯ ರಕ್ಷಣೆ ಮೂಲಸೌಕರ್ಯಕ್ಕೆ ‘ಹೈ ಟೆಕ್ ’ಸ್ಪರ್ಶ ನೀಡಲು 20,000 ಕೋ.ರೂ.ಹೂಡಿಕೆ. ಆಸ್ಪತ್ರೆಗಳು ಮತ್ತು ಐಸಿಯುಗಳಲ್ಲಿ ಹಾಸಿಗೆಗಳ ಸಂಖ್ಯೆ ಶೇ.100ರಷ್ಟು ಹೆಚ್ಚಳ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News