ಈಡಿ ವಿಚಾರಣೆಗೆ ಗೈರುಹಾಜರಾದ ಮಹುವಾ ಮೊಯಿತ್ರಾ
Update: 2024-02-19 13:53 GMT
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸೋಮವಾರ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆ (ಈಡಿ)ಗೆ ಗೈರುಹಾಜರಾಗಿದ್ದಾರೆ. ವಿದೇಶಿ ವಿನಿಮಯದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ತನ್ನೆದುರು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯವು ಅವರಿಗೆ ಕಳೆದ ವಾರ ಸಮನ್ಸ್ ನೀಡಿತ್ತು.
ತನ್ನೆದುರು ಫೆಬ್ರವರಿ 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅನುಷ್ಠಾನ ನಿರ್ದೇಶನಾಲಯವು ಫೆಬ್ರವರಿ 15ರಂದು ಮೊಯಿತ್ರಾಗೆ ಸಮನ್ಸ್ ನೀಡಿತ್ತು. ಕೆಲವು ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದಿಲ್ಲಿಯಲ್ಲಿರುವ ಅನುಷ್ಠಾನ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು.
1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮ)ಯಡಿ ಮಹುವಾರನ್ನು ವಿಚಾರಣೆ ಮಾಡಲು ಈಡಿ ಬಯಸಿದೆ.
ಮೊಯಿತ್ರಾ ವಿರುದ್ಧ ಸಿಬಿಐ ಕೂಡ ವಿಚಾರಣೆ ನಡೆಸುತ್ತಿದೆ. ಲೋಕಪಾಲರ ಸೂಚನೆಯಂತೆ ಸಿಬಿಐ ಪ್ರಾಥಮಿಕ ತನಿಖೆ ನಡೆಸುತ್ತಿದೆ.