ಉತ್ತರ ಪ್ರದೇಶ: ಮೊಹರಂ ಮೆರವಣಿಗೆಯಲ್ಲಿ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ವ್ಯಕ್ತಿಯ ಬಂಧನ

Update: 2024-07-11 12:23 IST
ಉತ್ತರ ಪ್ರದೇಶ: ಮೊಹರಂ ಮೆರವಣಿಗೆಯಲ್ಲಿ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ವ್ಯಕ್ತಿಯ ಬಂಧನ

Screengrab:X/@HateDetectors

  • whatsapp icon

ಲಕ್ನೋ: ರವಿವಾರ ಮೊಹರಂ ಮೆರವಣಿಗೆ ವೇಳೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸದ್ದಕ್ಕೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸಮಗ್ರತೆ ವಿರುದ್ಧ ಆರೋಪ ಮತ್ತು ಪೂರ್ವಗ್ರಹಪೀಡಿತ ಸಮರ್ಥನೆ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.

ವ್ಯಕ್ತಿಯೊಬ್ಬರು ಮೆರವಣಿಗೆಯಲ್ಲಿ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಬಗೆಗಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ಸಾಹಿಲ್ ಅಲಿಯಾಸ್ ಬಾದ್‍ಷಹಾ ಹಾಗೂ ಮುಹಮ್ಮದ್ ಗೋರ್ಖಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯಾವುದೇ ಅನುಮತಿ ಇಲ್ಲದೇ ಕೆಲ ಯುವಕರು ರವಿವಾರ ರಾತ್ರಿ ಮಾಧೋ ಸಿಂಗ್ ಬಜಾರ್‍ನಲ್ಲಿ ಮೆರವಣಿಗೆ ನಡೆಸಿದ್ದಾರೆ ಎಂದು ಔರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಚ್ಚಿದಾನಂದ ಪಾಂಡೆ ಹೇಳಿದ್ದಾರೆ.

ಮೆರವಣಿಗೆಯಲ್ಲಿ ಪಾಲ್ಗೊಂಡವರು ಫೆಲೆಸ್ತೀನ್ ಧ್ವಜ ಹಿಡಿದಿದ್ದರು ಮತ್ತು ಘೋಷಣೆಗಳನ್ನು ಕೂಡಾ ಕೂಗಿದರು ಎನ್ನುವುದು ಪೊಲೀಸರ ಆರೋಪ. ಜನರಲ್ಲಿ ದ್ವೇಷ ಭಾವನೆಯನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ವಿಡಿಯೊದಲ್ಲಿ ಕಂಡುಬರುವ ಗೋರಖ್ ಮತ್ತು ಇತರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News