ವಿವಾಹ ಸಮಾರಂಭದಲ್ಲಿ ಶುಭ ಕೋರುವ ವೇಳೆ ಹೃದಯಾಘಾತದಿಂದ ವ್ಯಕ್ತಿ ಮೃತ್ಯು!
ಹೈದರಾಬಾದ್: ವಿವಾಹ ಸಮಾರಂಭದಲ್ಲಿ ವಧು-ವರರಿಗೆ ಶುಭ ಕೋರುವ ಸಂದರ್ಭದಲ್ಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಮೃತಪಟ್ಟ ಅಪರೂಪದ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ. ಇದರಿಂದಾಗಿ ವಿವಾಹ ಸಮಾರಂಭದಲ್ಲಿ ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಂಭ್ರಮದ ನಡುವೆ ನವದಂಪತಿಗೆ ಉಡುಗೊರೆಯನ್ನು ನೀಡುತ್ತಿರುವ ಸಂದರ್ಭದಲ್ಲಿ ಆ ವ್ಯಕ್ತಿ ಸಮತೋಲನ ಕಳೆದುಕೊಂಡಿದ್ದು, ವಿಡಿಯೊದಲ್ಲಿ ದಾಖಲಾಗಿದೆ. ಮೃತ ಯುವಕ ವಂಶಿ ಈ ಮೊದಲು ಬೆಂಗಳೂರಿನಲ್ಲಿ ಅಮೆಜಾನ್ ನಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರ ವಿವಾಹಕ್ಕಾಗಿ ಕರ್ನೂಲಿನ ಪೆನುಮುಂಡ ಗ್ರಾಮಕ್ಕೆ ಆಗಮಿಸಿದ್ದರು.
ಉಡುಗೊರೆ ಹಸ್ತಾಂತರಿಸಿದ ಬಳಿಕ ವರ ಹೊಳೆಯುವ ಉಡುಗೊರೆಯನ್ನು ಬಿಚ್ಚಿದ್ದರು. ಆಗ ವಂಶಿ ಎಡಕ್ಕೆ ವಾಲಿದರು. ಪಕ್ಕದಲ್ಲಿ ನಿಂತಿದ್ದವರು ಅವರು ಬೀಳದಂತೆ ಹಿಡಿದುಕೊಂಡರು. ಧೋನ್ ಸಿಟಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ತಕ್ಷಣ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು.
ಯುವಕರು ಜಿಮ್ ಗಳಲ್ಲಿ ಹಾಗು ಅನಿರೀಕ್ಷಿತ ಸ್ಥಳಗಳಲ್ಲಿ ಹೃದಯಸ್ತಂಭನದಿಂದ ಮೃತಪಡುತ್ತಿರುವ ಘಟನೆಗಳು ಹೆಚ್ಚುತ್ತಿವೆ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಹೇಳುತ್ತಾರೆ. ಮಧುಮೇಹ, ಕುಳಿತು ಕೆಲಸ ಮಾಡುವ ಜೀವನಶೈಲಿ, ಮಾಲಿನ್ಯ, ಒತ್ತಡ, ಅಧಿಕ ವರ್ಕೌಟ್ ಮತ್ತು ಸ್ಟಿರಾಯ್ಡ್ ಅಂಶಗಳು ಇದಕ್ಕೆ ಪ್ರಮುಖ ಕಾರಣ ಎಂದು ಕೇಂದ್ರ ಮುಂಬೈ ವೊಕಾರ್ಡ್ ಆಸ್ಪತ್ರೆಯ ವೈದ್ಯ ಡಾ.ರವಿ ಗುಪ್ತಾ ಅಭಿಪ್ರಾಯಪಡುತ್ತಾರೆ.
A joyful occasion turned tragic when a man suffered a fatal heart attack on stage while presenting a wedding gift to his friend.
— The Siasat Daily (@TheSiasatDaily) November 21, 2024
The incident occurred in Penumada village of Krishnagiri mandal of Kurnool district, Andhra Pradesh. The deceased has been identified as Vamsi who… pic.twitter.com/3k3R0QN7Kp