ಆಯ್ಕೆಗೊಂಡ 28 ವರ್ಷಗಳ ಬಳಿಕ ಅಂಚೆ ಇಲಾಖೆಯಲ್ಲಿ ನೇಮಕಾತಿಗೆ ಆದೇಶ

Update: 2023-10-26 08:05 GMT

ಹೊಸದಿಲ್ಲಿ: ವ್ಯಕ್ತಿಯೊಬ್ಬರು ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಇಪ್ಪತ್ತೆಂಟು ವರ್ಷಗಳ ನಂತರ, ಅವರನ್ನು ಹುದ್ದೆಗೆ ಅನರ್ಹಗೊಳಿಸಿರುವ ಕ್ರಮದಲ್ಲಿ ದೋಷವಿದೆ ಎಂದು ಗಮನಿಸಿ ಸುಪ್ರೀಂ ಕೋರ್ಟ್ ಅವರ ನೇಮಕಾತಿಗೆ ಆದೇಶಿಸಿದೆ.

ಅಂಕುರ್ ಗುಪ್ತಾ ಅವರು 1995 ರಲ್ಲಿ ಅಂಚೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಪ್ರೀ-ಇಂಡಕ್ಷನ್ ತರಬೇತಿಗೆ ಆಯ್ಕೆಯಾದ ನಂತರ, ಅವರು ವೃತ್ತಿಪರ ಸ್ಟ್ರೀಮ್ ನಿಂದ ಮಧ್ಯಂತರ ಶಿಕ್ಷಣವನ್ನು ಪೂರ್ಣಗೊಳಿಸಿದ ಕಾರಣಕ್ಕಾಗಿ ಅವರನ್ನು ಮೆರಿಟ್ ಪಟ್ಟಿಯಿಂದ ಹೊರಗಿಡಲಾಗಿತ್ತು.

ಗುಪ್ತಾ ಅವರು ಇತರ ವಿಫಲ ಅಭ್ಯರ್ಥಿಗಳೊಂದಿಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮೊರೆ ಹೋಗಿದ್ದು, 1999 ರಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಆದರೆ, ಅಂಚೆ ಇಲಾಖೆಯು ಈ ಆದೇಶವನ್ನು ಪ್ರಶ್ನಿಸಿ 2000 ದಲ್ಲಿ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಿತು. ಹೈಕೋರ್ಟ್ 2017 ರಲ್ಲಿ ಅರ್ಜಿಯನ್ನು ವಜಾಗೊಳಿಸಿ, CAT ಆದೇಶವನ್ನು ಎತ್ತಿಹಿಡಿಯಿತು. ಹೈಕೋರ್ಟ್‌ನಲ್ಲಿ ಮರುಪರಿಶೀಲನೆಯನ್ನು ಸಲ್ಲಿಸಲಾಯಿತಾದರೂ, 2021 ರಲ್ಲಿ ಅದನ್ನು ವಜಾಗೊಳಿಸಲಾಯಿತು. ಅದಾಗ್ಯೂ, ನಂತರ ಅಂಚೆ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News