ಕೋಲ್ಕತಾ | ಮನೋಜ್ ಕುಮಾರ್ ವರ್ಮ ನೂತನ ಪೊಲೀಸ್ ಆಯುಕ್ತ

Update: 2024-09-17 14:07 GMT

PC : indianexpress.com

ಕೋಲ್ಕತಾ : ಮನೋಜ್ ಕುಮಾರ್ ವರ್ಮ ಕೋಲ್ಕತಾದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಇದಕ್ಕೂ ಮುನ್ನ, ಕಿರಿಯ ವೈದ್ಯರೊಂದಿಗೆ ನಡೆದಿದ್ದ ಸಭೆಯಲ್ಲಿ ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಕುಮಾರ್ ಗೋಯಲ್ ಅವರನ್ನು ಸಂಜೆ ನಾಲ್ಕು ಗಂಟೆಯೊಳಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದರು. ಅದರಂತೆ ಮಧ್ಯಾಹ್ನ 3.30ಕ್ಕೆ ಮನೋಜ್ ಕುಮಾರ್ ವರ್ಮ ಅವರನ್ನು ರಾಜ್ಯ ಸರಕಾರವು ಕೋಲ್ಕತಾದ ನೂತನ ಪೊಲೀಸ್ ಆಯುಕ್ತರನ್ನಾಗಿ ಪ್ರಕಟಿಸಿತು.

ಈ ನಡುವೆ, ಗೋಯಲ್ ಅವರನ್ನು ವಿಶೇಷ ಕಾರ್ಯಪಡೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಇದಲ್ಲದೆ ಉತ್ತರ ಕೋಲ್ಕತಾದ ಉಪ ಪೊಲೀಸ್ ಆಯುಕ್ತ ಅಭಿಷೇಕ್ ಗುಪ್ತರನ್ನೂ ವರ್ಗಾಯಿಸಲಾಗಿದ್ದು, ಅವರನ್ನು ಇಎಫ್ಆರ್ ನ ಎರಡನೆ ಬೆಟಾಲಿಯನ್ ಗೆ ನೇಮಕ ಮಾಡಲಾಗಿದೆ. ಅವರ ಜಾಗಕ್ಕೆ ಪೂರ್ವ ಸಿಲಿಗುರಿಯ ಉಪ ಪೊಲೀಸ್ ಆಯುಕ್ತ ದೀಪಕ್ ಸರ್ಕಾರ್ ಅವರನ್ನು ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News