ಸಿಂಧೂ ಜಲ ಒಪ್ಪಂದ ಮರುಪರಿಶೀಲನೆ ಕೋರಿ ಪಾಕಿಸ್ತಾನಕ್ಕೆ ನೋಟಿಸ್

Update: 2024-09-18 16:28 GMT

PC :  indianexpress.com

ಹೊಸದಿಲ್ಲಿ : ಸಿಂಧೂ ನದಿ ಜಾಲಕ್ಕೆ ಒಳಪಟ್ಟ ಆರು ನದಿಗಳ ನೀರನ್ನು ಉಭಯ ದೇಶಗಳ ನಡುವೆ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದ ಆರು ದಶಕಗಳಿಗೂ ಅಧಿಕ ಹಳೆಯ ಸಿಂಧೂ ಜಲ ಒಪ್ಪಂದದಲ್ಲಿ ಬದಲಾವಣೆಗಳನ್ನು ತರಬೇಕೆಂದು ಕೋರಿ ಭಾರತ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ.

ಪರಿಸ್ಥಿತಿಯಲ್ಲಿ ಆಗಿರುವ ‘‘ಮೂಲಭೂತ ಮತ್ತು ಊಹಿಸಲಾಗದ’’ ಬದಲಾವಣೆಗಳ ಹಿನ್ನೆಲೆಯಲ್ಲಿ ಒಪ್ಪಂದದ ಮರುಪರಿಶೀಲನೆ ಆಗಬೇಕಾಗಿದೆ ಎಂದು ಭಾರತ ಹೇಳಿದೆ.

ಸಿಂಧೂ ಜಲ ಒಪ್ಪಂದದ II(3) ವಿಧಿಯನ್ವಯ ಆಗಸ್ಟ್ 30ರಂದು ಈ ನೋಟಿಸನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಸರಕಾರಿ ಮೂಲಗಳು ಪಿಟಿಐಗೆ ಬುಧವಾರ ತಿಳಿಸಿವೆ.

ಪಾಕಿಸ್ತಾನಕ್ಕೆ ಭಾರತ ಇಂಥ ನೋಟಿಸ್ ನೀಡುವುದು ಇದೇ ಮೊದಲ ಬಾರಿಯಲ್ಲ. 2023 ಜನವರಿಯಲ್ಲೂ ಭಾರತವು ಒಪ್ಪಂದದ ಮರುಪರಿಶೀಲನೆ ಕೋರಿ ಪಾಕಿಸ್ತಾನಕ್ಕೆ ನೋಟಿಸ್ ನೀಡಿತ್ತು. ಭಾರತೀಯ ಭಾಗದ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನ ನಿರಂತರವಾಗಿ ಆಕ್ಷೇಪಗಳನ್ನು ವ್ಯಕ್ತಪಡಿಸಿದ ಬಳಿಕ ಭಾರತ ಆ ನೋಟಿಸ್ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News