ಭಗತ್ ಸಿಂಗ್ ಕೃತ್ಯವನ್ನು ಪುನಾರವರ್ತಿಸಲು ಬಯಸಿದ್ದ ಮನೋರಂಜನ್
Update: 2023-12-14 22:06 IST

ಮನೋರಂಜನ್, Photo : NDTV
ಹೊಸದಿಲ್ಲಿ: ಲೋಕಸಭೆಯಲ್ಲಿ ಹೊಗೆಬಾಂಬ್ ಸಿಡಿಸಿದ ಪ್ರಕರಣದ ಆರೋಪಿ ಮನೋರಂಜನ್ ಡಿ., ಬ್ರಿಟಿಶ್ ಆಳ್ವಿಕೆಯ ಸಂದರ್ಭ ದಿಲ್ಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನ ಕೃತ್ಯವನ್ನು ಪುನರಾವರ್ತಿಸಲು ಬಯಸಿದ್ದನೆಂದು ಆತನ ವಿಚಾರಣೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.
ಮನೋರಂಜನ್ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ. ಆತ ಅತ್ಯಂತ ಶಾಂತ ಸ್ವಭಾವದವನಾಗಿದ್ದ. ಆದರೆ ಮನೋರಂಜನ್ ಓದಿದ ಪುಸ್ತಕಗಳನ್ನು ಅವಲೋಕಿಸಿದಾಗ ಆತನೊಬ್ಬ ಕ್ರಾಂತಿಕಾರಿ ಪ್ರವೃತ್ತಿಯವನೆಂಬಂತೆ ತೋರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು
ಬುಧವಾರ ಸಂಸತ್ ಭವನದ ಹೊರಗೆ ಹೊಗೆಬಾಂಬ್ ಸಿಡಿಸಿದ ನೀಲಂ ದೇವಿ ಕೂಡಾ ಭಗತ್ ಸಿಂಗ್ ನ ಭಾವಚಿತ್ರದ ಜೊತೆ ತನ್ನ ಫೋಟೋ ತೆಗೆಸಿಕೊಂಡಿರುವ ಛಾಯಾಚಿತ್ರವನ್ನು ಪೋಸ್ಟ್ ಮಾಡಿದ್ದಳು.