ಕುಕಿ ಬಂಡುಕೋರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ : ಮಣಿಪುರ ಎನ್‌ಡಿಎ ಶಾಸಕರ ಒತ್ತಾಯ

Update: 2024-11-19 18:01 GMT

PC: X.com

ಇಂಫಾಲ : ಮಣಿಪುರದಲ್ಲಿ ಹೊಸದಾಗಿ ಹಿಂಸೆ ತಾಂಡವವಾಡುತ್ತಿರುವಂತೆಯೇ, ರಾಜ್ಯದದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿದ 27 ಶಾಸಕರು, ಜಿರಿಬಮ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳಿಗೆ ಕಾರಣರಾದ ಕುಕಿ ಬಂಡುಕೋರರ ವಿರುದ್ಧ ‘‘ಬೃಹತ್ ಕಾರ್ಯಾಚರಣೆ’’ ನಡೆಸಬೇಕು ಎಂಬುದಾಗಿ ಕರೆ ನೀಡುವ ನಿರ್ಣಯವೊಂದನ್ನು ಅಂಗೀಕರಿಸಿದ್ದಾರೆ.

ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಯ ಹಿನ್ನೆಲೆಯಲ್ಲಿ ಏಳು ದಿನಗಳೊಳಗೆ ಬಂಡುಕೋರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೋಮವಾರ ರಾತ್ರಿ ನಡೆದ ಸಭೆಯೊಂದರಲ್ಲಿ ಈ ಶಾಸಕರು ಒತ್ತಾಯಿಸಿದ್ದಾರೆ.

ಕುಕಿ ಬಂಡುಕೋರರನ್ನು ಏಳು ದಿನಗಳಲ್ಲಿ ‘‘ಕಾನೂನುಬಾಹಿರ ಸಂಘಟನೆ’’ ಎಂಬುದಾಗಿ ಘೋಷಿಸಬೇಕು ಮತ್ತು ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು ಎಂಬುದಾಗಿಯೂ ನಿರ್ಣಯವು ಕರೆ ನೀಡಿದೆ.

ಈ ವಲಯದಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು ಮರು ಹೇರವುದಕ್ಕೆ ಸಂಬಂಧಿಸಿ ನವೆಂಬರ್ 14ರಂದು ಹೊರಡಿಸಲಾಗಿರುವ ನಿರ್ದೇಶನವನ್ನು ಮರುಪರಿಶೀಲಿಸುವಂತೆಯೂ ಈ ಶಾಸಕರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಏಳು ದಿನಗಳೊಳಗೆ ಈ ನಿರ್ಣಯಗಳ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಎನ್‌ಡಿಎ ಶಾಸಕರು ಮಣಿಪುರದ ಜನತೆಯೊಂದಿಗೆ ಸಮಾಲೋಚನೆ ನಡೆಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ಏಳು ಶಾಸಕರು ವೈದ್ಯಕೀಯ ನೆಲೆಯಲ್ಲಿ ಸಭೆಯಿಂದ ದೂರ ಉಳಿದಿದ್ದರು. ಇತರ 11 ಮಂದಿ ತಮ್ಮ ಅನುಪಸ್ಥಿತಿಗೆ ಕಾರಣಗಳನ್ನು ನೀಡಿಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News