‘ಮೇರಾ ಯುವ ಭಾರತ’ ರಾಷ್ಟ್ರವ್ಯಾಪಿ ವೇದಿಕೆಗೆ ಅ.31ರಂದು ಚಾಲನೆ: ಪ್ರಧಾನಿ

Update: 2023-10-29 17:22 GMT

ಪ್ರಧಾನಿ ನರೇಂದ್ರ ಮೋದಿ Photo- PTI

ಹೊಸದಿಲ್ಲಿ: ರಾಷ್ಟ್ರವ್ಯಾಪಿ ‘ಮೇರಾ ಯುವ ಭಾರತ ’ವೇದಿಕೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅ.31ರಂದು ಚಾಲನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಪ್ರಕಟಿಸಿದರು. ವೇದಿಕೆಯು ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸಲು ಯುವಜನತೆಗೆ ಅವಕಾಶ ನೀಡಲಿದೆ ಎಂದು ಅವರು ತಿಳಿಸಿದರು.

ಮೇರಾ ಯುವ ಭಾರತ ’ವೆಬ್‌ಸೈಟ್ ಕೂಡ ಆರಂಭಗೊಳ್ಳಲಿದ್ದು, ಯುವಜನರು MYBharat.Gov.Inನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ‘ಮೇರಾ ಯುವ ಭಾರತ’ ಶ್ರೀಮಂತ ಭಾರತವನ್ನು ನಿರ್ಮಿಸುವಲ್ಲಿ ದೇಶದ ಯುವಶಕ್ತಿಯನ್ನು ಕ್ರೋಡೀಕರಿಸಲು ವಿಶಿಷ್ಟ ಪ್ರಯತ್ನವಾಗಿದೆ ಎಂದು ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್ ’ನಲ್ಲಿ ಮೋದಿ ಹೇಳಿದರು.

ಅ.31 ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯೂ ಆಗಿದೆ ಎಂದು ಹೇಳಿದ ಮೋದಿ,ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.

ವೋಕಲ್ ಫಾರ್ ಲೋಕಲ್ ’ಗೆ ಮತ್ತೊಮ್ಮೆ ಒತ್ತು ನೀಡಿದ ಪ್ರಧಾನಿ ‘ಪ್ರತಿಸಲದಂತೆ ಈ ಸಲವೂ ಹಬ್ಬಗಳ ಸಂದರ್ಭದಲ್ಲಿ ಖರೀದಿಗಳಲ್ಲಿ ಸ್ಥಳೀಯ ಉತ್ನನ್ನಗಳು ನಮ್ಮ ಆದ್ಯತೆ ಆಗಿರಬೇಕು ’ ಎಂದರು.

ಪ್ರವಾಸಕ್ಕೆ ಅಥವಾ ಯಾತ್ರೆಗೆ ತೆರಳಿದಾಗ ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳನ್ನೇ ಖರೀದಿಸುವಂತೆ ಅವರು ಜನತೆಯನ್ನು ಕೋರಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News