ಕಛ್ ಗಡಿಯಲ್ಲಿ ಬಿಎಸ್‌ಎಫ್ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

Update: 2024-10-31 15:07 GMT

ನರೇಂದ್ರ ಮೋದಿ | PC : PTI 

ಕಛ್ : ಭಾರತೀಯ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸುವ ತನ್ನ ಸಂಪ್ರದಾಯವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗುಜರಾತ್‌ನ ಕಛ್ ಗಡಿಯಲ್ಲಿ ಗಡಿಭದ್ರತಾಪಡೆಯ (ಬಿಎಸ್‌ಎಫ್) ಸಿಬ್ಬಂದಿಗಳನ್ನು ಭೇಟಿ ಮಾಡಿದರು. ಸೇನಾ ಸಮವಸ್ತ್ರವನ್ನು ಧರಿಸಿದ್ದ ಪ್ರಧಾನಿಯವರುು ಯೋಧರಿಗೆ ಸಿಹಿತಿಂಡಿ ವಿತರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ.

2014ರಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ಪ್ರತಿ ವರ್ಷವೂ ದೇಶದ ವಿವಿಧೆಡೆ ನಿಯೋಜಿತರಾದ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. 2014ರಲ್ಲಿ ಅವರು ಸಿಯಾಚಿನ್‌ ನಲ್ಲಿ ದೀಪಾವಳಿ ಆಚರಿಸಿದ್ದರು. ಆನಂತರದ ವರ್ಷಗಳಲ್ಲಿ ಪಂಜಾಬ್ ಗಡಿ, ಹಿಮಾಚಲ ಪ್ರದೇಶದ ಸುಮ್ಡೊ, ಜಮ್ಮುಕಾಶ್ಮೀರದ ಗುರೆಝ್ ಸೆಕ್ಟರ್, ಉತ್ತರಾಖಂಡದ ಹಾರ್ಸಿಲ್, ಜಮ್ಮುಕಾಶ್ಮೀರದ ರಜೌರಿ, ರಾಜಸ್ಚಾನದ ಲೊಂಗೆವಾಲಾ, ಕಾಶ್ಮೀರದ ನೌಸೇರಾ, ಕಾರ್ಗಿಲ್‌ನಲ್ಲಿ ಹಾಗೂ ಕಳೆದ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ಇದಕ್ಕೂ ಮುನ್ನ ಪ್ರಧಾನಿಯವರು ದೇಶದ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ದೀಪಾವಳಿಯು ಆರೋಗ್ಯ , ಸಂತಸ ಹಾಗೂ ಸಮೃದ್ಧಿಯನ್ನು ತರಲಿ. ಲಕ್ಷ್ಮೀ ಮಾತೆ ಹಾಗೂ ಶ್ರೀಗಣೇಶನ ಆಶೀರ್ವಾದೊಂದಿಗೆ ಪ್ರತಿಯೊಬ್ಬರಿಗೂ ಅಭ್ಯುದಯವಾಗಲಿ ಎಂದವರು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹಾರೈಸಿದ್ದಾರೆ.

ಪ್ರಧಾನಿಯವರು ಇಂದು ಬೆಳಗ್ಗೆ ಗುಜರಾತ್‌ನ ಏಕತಾನಗರದಲ್ಲಿರುವ ಏಕತಾ ಪ್ರತಿಮೆಯ ಬಳಿಕ ರಾಷ್ಟ್ರೀಯ ಏಕತಾ ದಿನವವನ್ನು ಆಚರಿಸಿದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News