ದೇಶದ ಜನತೆಗೆ ದೀಪಾವಳಿಯ ಶುಭಾಷಯ ಕೋರಿದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ

Update: 2024-10-31 15:03 GMT

, ಪ್ರಧಾನಿ ನರೇಂದ್ರ ಮೋದಿ , ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ | PC : X 

ಹೊಸದಿಲ್ಲಿ : ದೀಪಾವಳಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಗುರುವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ದ್ರೌಪದಿ ಮುರ್ಮು ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ, ‘‘ದೀಪಾವಳಿಯ ಈ ಸುಸಂದರ್ಭದಲ್ಲಿ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಇರುವ ಎಲ್ಲಾ ಭಾರತೀಯರಿಗೆ ಶುಭಾಷಯ ಕೋರುತ್ತೇನೆ’’ ಎಂದಿದ್ದಾರೆ.

ದೀಪಾವಳಿ ಸಂತಸ, ಉತ್ಸಾಹದ ಹಬ್ಬ ಎಂದು ಹೇಳಿದ ದ್ರೌಪದಿ ಮುರ್ಮು, ಅಜ್ಞಾನದ ವಿರುದ್ಧ ಜ್ಞಾನ ಹಾಗೂ ಕೆಟ್ಟದರ ವಿರುದ್ಧ ಒಳ್ಳೆಯದು ಜಯ ಗಳಿಸಿರುವುದುದನ್ನು ಈ ಹಬ್ಬ ಸಾಂಕೇತಿಸುತ್ತದೆ ಎಂದರು.

ದೀಪಾವಳಿಯ ಈ ಸುಸಂದರ್ಭದಲ್ಲಿ ನಾವು ಆತ್ಮ ಸಾಕ್ಷಿಯನ್ನು ಬೆಳಗಿಸಬೇಕು, ಪ್ರೀತಿ ಹಾಗೂ ಸಹಾನುಭೂತಿಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ‘‘ದೇಶದ ಜನತೆಗೆ ದೀಪಾವಳಿಯ ಶುಭಾಷಯಗಳು. ಈ ಬೆಳಕಿನ ಹಬ್ಬದ ಸಂದರ್ಭ ಪ್ರತಿಯೊಬ್ಬರಿಗೂ ಆರೋಗ್ಯ, ಸಂತೋಷ, ಸಮೃದ್ಧ ಜೀವನ ಸಿಗಲಿ ಎಂದು ಹಾರೈಸುತ್ತೇನೆ. ಮಾತೆ ಲಕ್ಷ್ಮೀ ಹಾಗೂ ಶ್ರೀ ಗಣೇಶನ ಆಶೀರ್ವಾದ ಪ್ರತಿಯೊಬ್ಬರ ಮೇಲಿರಲಿ’’ ಎಂದಿದ್ದಾರೆ.

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ‘ಎಕ್ಸ್’ನ ಪೋಸ್ಟ್‌ನಲ್ಲಿ, ‘‘ದೀಪಾವಳಿಯ ಬೆಳಕು ಏಕತೆ, ಸಮೃದ್ಧಿ ಮತ್ತು ಪ್ರಗತಿಯತ್ತ ನಮ್ಮನ್ನು ಮುನ್ನಡೆಸಲಿ. ಭರವಸೆ, ಬುದ್ಧಿವಂತಿಕೆ ಹಾಗೂ ಸಹಾನುಭೂತಿ ಅಪ್ಪಿಕೊಳ್ಳಿ. ಅದು ನಮ್ಮ ಬದುಕು ಹಾಗೂ ಸಮುದಾಯಗಳನ್ನು ಶ್ರೀಮಂತಗೊಳಿಸುವುದು’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News