ಹುಸಿಬಾಂಬ್ ಕರೆಗಳ ಮೂಲ ಪತ್ತೆಹಚ್ಚಲು ಎಫ್‌ ಬಿ ಐ, ಇಂಟರ್‌ ಪೋಲ್ ನೆರವು ಕೋರಿದ ಭಾರತ

Update: 2024-10-31 17:55 GMT

Photo Credit: Reuters

ಹೊಸದಿಲ್ಲಿ : ಕಳೆದ ಎರಡು ವಾರಗಳಲ್ಲಿ 400ಕ್ಕೂ ಅಧಿಕ ಹುಸಿಬಾಂಬ್ ಬೆದರಿಕೆಗಳು ಭಾರತೀಯ ವಿಮಾನಗಳ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದ್ದು, ಇಂತಹ ಬೆದರಿಕೆ ಕರೆಗಳ ಕುರಿತ ತನಿಖೆ ನಡೆಸಲು ಕೇಂದ್ರ ಸರಕಾರವು ಅಮೆರಿಕ ಸರಕಾರ ಹಾಗೂ ಇಂಟರ್‌ ಪೋಲ್‌ನ ನೆರವನ್ನು ಕೋರಿದೆ.

ಈ ಹುಸಿಬಾಂಬ್ ಬೆದರಿಕೆ ಕರೆಗಳಿಗೂ, ಅಮೆರಿಕದಲ್ಲಿರುವ ಖಾಲಿಸ್ತಾನಿ ಪರ ಗುಂಪುಗಳಿಗೂ ನಂಟಿರುವ ಕುರಿತ ಯಾವುದೇ ಸುಳಿವನ್ನು ಪತ್ತೆಹಚ್ಚಲು ಭಾರತೀಯ ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಭಾರತವನ್ನು ಆರ್ಥಿಕವಾಗಿ ನಾಶಪಡಿಸಲು ನವೆಂಬರ್ 1ರಿಂದ ನವೆಂಬರ್ 19ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದನ್ನು ಬಹಿಷ್ಕರಿಸುವಂತೆ ಅಮೆರಿಕದಿಂದ ಕಾರ್ಯಾಚರಿಸುತ್ತಿರುವ ಸಿಖ್ಖ್ ಫಾರ್ ಜಸ್ಟೀಸ್ ಸಂಘಟನೆಯ ವರಿಷ್ಠ ಗುರುಪತ್ವಂತ್ ಸಿಂಗ್ ಪನ್ನೂನ್ ಕರೆ ನೀಡಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.

ಅಮೆರಿಕದ ಫೆಡರ್ ತನಿಖಾ ಸಂಸ್ತೆ ಎಫ್‌ಬಿಐ, ಭಾರತದ ಮನವಿಗೆ ಸ್ಪಂದಿಸಿದ್ದು, ಭಾರತೀಯ ಏರ್‌ಲೈನ್‌ ಗಳಿಗೆ ಬಂದಿರುವ ಹುಸಿಬಾಂಬ್ ಬೆದರಿಕೆ ಕರೆಗಳು ಹಾಗೂ ಇಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಸಹಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 15ರಿಂದ ಅಕ್ಟೋಬರ್ 28ರ ನಡುವೆ 15 ದಿನಗಳ ಅವಧಿಯಲ್ಲಿ 410ಕ್ಕೂ ಅಧಿಕ ಭಾರತೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News