ದ್ವೇಷ ಭಾಷಣ ಮುಂದುವರಿದರೂ ಯತಿ ನರಸಿಂಹಾನಂದ್ ವಿರುದ್ಧ ಕ್ರಮಕೈಗೊಂಡಿಲ್ಲ: ಪತ್ರಕರ್ತ ಮೊಹಮ್ಮದ್ ಝಬೇರ್

Update: 2024-10-04 14:51 GMT

Screengrab from the video | X/@zoo_bear

ಹೊಸದಿಲ್ಲಿ: ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ವಿರುದ್ಧ ಸದಾ ದ್ವೇಷ ಭಾಷಣ ಮಾಡುತ್ತಿರುವ ವಿವಾದಿತ ಅರ್ಚಕ ಯತಿ ನರಸಿಂಹಾನಂದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಪತ್ರಕರ್ತ ಮೊಹಮ್ಮದ್ ಝಬೇರ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಯತಿ ನರಸಿಂಹಾನಂದ್ ವಿರುದ್ಧ ಹಲವು ಎಫ್ ಐಆರ್ ದಾಖಲಾಗಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಝುಬೇರ್ ಗಮನ ಸೆಳೆದಿದ್ದಾರೆ.

ದಸರಾ ಆಚರಣೆಯ ಸಮಯದಲ್ಲಿ ಪ್ರವಾದಿ ಮೊಹಮ್ಮದ್ ಅವರ ಪ್ರತಿಕೃತಿಯನ್ನು ಸುಡುವಂತೆ ಪ್ರಚೋದಿಸುವ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡ ಪತ್ರಕರ್ತ ಮೊಹಮ್ಮದ್ ಝಬೇರ್, ಇದು ಯತಿ ನರಸಿಂಹಾನಂದ ಅವರ ದ್ವೇಷದ ಇತ್ತೀಚಿನ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಹಲವು ಪ್ರಕರಣಗಳಲ್ಲಿ ಪೊಲೀಸರು ನರಸಿಂಹಾನಂದ್ ವಿರುದ್ಧ ಎಫ್ಐಆರ್ ಗಳನ್ನು ದಾಖಲಿಸಿದ್ದರೂ, ಪೊಲೀಸರು ಅವರ ಮೇಲೆ ದುರ್ಬಲ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂದು ಪೋಸ್ಟ್ ಅನ್ನು ಝುಬೈರ್ ಉತ್ತರಪ್ರದೇಶ ಪೊಲೀಸರು ಮತ್ತು ಮತ್ತು ಗಾಝಿಯಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಇಂತಹ ಭಾಷಣಗಳು ಮುಂದುವರಿಯಲು ಏಕೆ ಅನುಮತಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಮುಹ್ಮಮದ್ ಝುಬೈರ್, ಪೋಸ್ಟ್ ಅನ್ನು ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ, ಮತ್ತು ಸಿಎಂ ಆದಿತ್ಯನಾಥ್, ಉತ್ತರಪ್ರದೇಶ ಪೊಲೀಸರಿಗೆ ಟ್ವೀಟ್ ಮಾಡಿ ಯತಿ ನರಸಿಂಹಾನಂದ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News