ತ.ನಾಡು: ಮಹಿಳೆ ಹತ್ಯೆಆರೋಪದಲ್ಲಿ ದೇವಸ್ಥಾನದ ಅರ್ಚಕನ ಬಂಧನ

Update: 2023-11-19 17:54 GMT

ಸಾಂದರ್ಭಿಕ ಚಿತ್ರ

ಸೇಲಂ: ಮಹಿಳೆಯೋರ್ವಳನ್ನು ಕೊಲೆ ಮಾಡಿರುವ ಆರೋಪದಲ್ಲಿ ಇಲ್ಲಿಯ ದೇವಸ್ಥಾನವೊಂದರ ಅರ್ಚಕನನ್ನು ಪೋಲಿಸರು ಶನಿವಾರ ಬಂಧಿಸಿದ್ದಾರೆ.

ಸೆಲ್ವಿ (28) ಕೊಲೆಯಾಗಿರುವ ಮಹಿಳೆ. ವಿವಾಹವಾಗಿ ಒಂಭತ್ತು ವರ್ಷಳಾಗಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಸಂತಾನ ಭಾಗ್ಯವನ್ನು ಕೋರಿ ಸೆಲ್ವಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದರು.

ಬಂಧಿತ ಆರೋಪಿ ವಿ.ಕುಮಾರ (42) ಇಲ್ಲಿಯ ಸಿವತಪುರಂ ನಿವಾಸಿಯಾಗಿದ್ದು,20 ವರ್ಷಗಳ ಹಿಂದೆ ತನ್ನ ಕೃಷಿ ಜಮೀನಿನಲ್ಲಿ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿದ್ದ ಮತ್ತು ಅರ್ಚಕನಾಗಿ ಸ್ವತಃ ಕಾರ್ಯ ನಿರ್ವಹಿಸುತ್ತಿದ್ದ.

ಅ.15ರಂದು ಸ್ನೇಹಿತೆಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಬಿದ್ದಿದ್ದ ಸೆಲ್ವಿ ಬಳಿಕ ನಾಪತ್ತೆಯಾಗಿದ್ದಳು,ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸೆಲ್ವಿಯ ಪತಿ ಪಸುವರಾಜ್ ಈ ಬಗ್ಗೆ ಗುರುವಾರ ಥರಮಂಗಲಂ ಪೋಲಿಸ್ ಠಾಣೆಗೆ ದೂರು ನೀಡಿದ್ದ. ಶೋಧ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕುಮಾರನ ದೇವಸ್ಥಾನದ ಬಳಿ ಪೊದೆಯೊಂದರಲ್ಲಿ ಸೆಲ್ವಿ ಶವವನ್ನು ಪತ್ತೆ ಹಚ್ಚಿದ್ದಾರೆ.

ಒಂದು ವಾರಕ್ಕೂ ಹೆಚ್ಚು ಸಮಯದಿಂದ ಸೆಲ್ವಿ ಈ ದೇವಸ್ಥಾನಕ್ಕೆ ಹೋಗುತ್ತಿದ್ದಳು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕೆಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ ಕುಮಾರ ದೈಹಿಕ ಸಂಪರ್ಕವನ್ನು ಬಯಸಿದ್ದ,ಆದರೆ ಆಕೆ ನಿರಾಕರಿಸಿದ್ದರಿಂದ ಹತ್ಯೆ ಮಾಡಿದ್ದಾನೆ ಎಂದು ಪೋಲಿಸರು ಶಂಕಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News