ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನೂ ಮರಳಿ ಪಡೆಯುವುದು ಬಿಜೆಪಿಯ ಬಯಕೆ: ಕಂಗನಾ ರಣಾವತ್

Update: 2024-11-17 09:53 GMT

ಕಂಗನಾ ರಣಾವತ್ (PTI)

ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನಂತರ ‘ಬಟೇಂಗೆ ತೊ ಕಟೆಂಗೆ’ ಘೋಷಣೆಗೆ ತಮ್ಮ ದನಿಯನ್ನೂ ಕೂಡಿಸಿರುವ ನಟಿ, ಬಿಜೆಪಿ ಸಂಸದೆ, ಕಂಗನಾ ರಣಾವತ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನೂ ಮರಳಿ ಪಡೆಯುವುದು ಬಿಜೆಪಿಯ ಬಯಕೆಯಾಗಿದೆ ಎಂದು ಹೇಳಿದ್ದಾರೆ.

“ಇದು ಒಗ್ಗಟ್ಟಿಗಾಗಿನ ಕರೆಯಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಮಗೆ ಬಾಲ್ಯದಿಂದಲೂ ಕಲಿಸಲಾಗಿದೆ. ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ. ವಿಭಜನೆಯಾದರೆ, ತುಂಡರಿಸಿ ಹೋಗುತ್ತೇವೆ. ನಮ್ಮದು ಸನಾತನ ಪಕ್ಷವಾಗಿದ್ದು, ಪಾಕಿಸ್ತಾನ ಕಾಶ್ಮೀರವನ್ನೂ ಮರಳಿ ಪಡೆಯಬೇಕೆಂದು ನಮ್ಮ ಪಕ್ಷ ಬಯಸುತ್ತಿದೆ. ವಿಭಜನೆ ಮಾಡುವ ವಿರೋಧ ಪಕ್ಷಗಳ ಪಿತೂರಿಯು ವಿಫಲವಾಗಲಿದೆ” ಎಂದು ಅವರು ಹೇಳಿದ್ದಾರೆ.

ಹಿಂದೂಗಳ ಒಗ್ಗಟ್ಟಿಗೆ ಕರೆ ನೀಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗೆ ಈ ಘೋಷಣೆಯನ್ನು ಚಾಲ್ತಿಗೆ ತಂದಿದ್ದರು. ಸೆ. 23ರಂದು ತಮ್ಮ ಘೋಷಣೆಯನ್ನು ಪುನರುಚ್ಚರಿಸಿದ್ದ ಆದಿತ್ಯನಾಥ್, ಒಡಕಿನಿಂದಾಗಿಯೇ ಆಕ್ರಮಣಕೋರರು ರಾಮಮಂದಿರವನ್ನು ಧ್ವಂಸಗೊಳಿಸಿದ್ದರು ಎಂದು ಪ್ರತಿಪಾದಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News