ಮಧ್ಯಪ್ರದೇಶ: ಇದೇ ಪ್ರಥಮ ಬಾರಿಗೆ ʼವಾಟ್ಸ್ಆ್ಯಪ್ ಪ್ರಮುಖ್ʼ ನನ್ನು ನೇಮಿಸಿದ ಬಿಜೆಪಿ

Update: 2024-11-17 09:59 GMT

Photo credit: NDTV

ಭೋಪಾಲ್: ಇದೇ ಪ್ರಥಮ ಬಾರಿಗೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ʼವಾಟ್ಸ್ ಆ್ಯಪ್ ಪ್ರಮುಖ್ʼ ನನ್ನು ಬಿಜೆಪಿ ನೇಮಿಸಿದೆ. ಎಂಎಸ್ಸಿ ಪದವೀಧರ ರಾಮ್ ಕುಮಾರ್ ಚೌರಾಸಿಯ ಎಂಬುವವರನ್ನು ವಾಟ್ಸ್ ಆ್ಯಪ್ ಪ್ರಮುಖ್ ಆಗಿ ನೇಮಿಸಲಾಗಿದ್ದು, ವಾಟ್ಸ್ ಆ್ಯಪ್ ಮೂಲಕ ಜನರೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ.

ನವೆಂಬರ್ 20ರೊಳಗೆ ರಾಜ್ಯದಾದ್ಯಂತ ಇರುವ 65,015 ಮತಗಟ್ಟೆಗಳಲ್ಲಿ ಸಮಗ್ರ ಡಿಜಿಟಲ್ ಜಾಲವನ್ನು ನಿರ್ಮಿಸುವ ವಿಶಾಲ ಯತ್ನದ ಭಾಗವಾಗಿ ಮಧ್ಯಪ್ರದೇಶದಲ್ಲಿ ಪ್ರಥಮ ಬಾರಿಗೆ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಉಪಕ್ರಮಗಳಿಂದ ಮುಂಬರುವ ಮತಗಟ್ಟೆ ಸಮಿತಿಗಳ ಚುನಾವಣೆಗೂ ಮುನ್ನ, ತಳಮಟ್ಟದ ಸಂಪರ್ಕಗಳು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಬಿಜೆಪಿ ನಾಯಕರು ನಂಬಿದ್ದಾರೆ.

ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರಾಮ್ ಕುಮಾರ್ ಚೌರಾಸಿಯ, ಗರಿಷ್ಠ ಸಂಖ್ಯೆಯ ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುವ ಹಾಗೂ ವಾಟ್ಸ್ ಆ್ಯಪ್ ಮೂಲಕ ಜನರ ಬಳಿಗೆ ಸರಕಾರಿ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆಯನ್ನು ಈ ಹುದ್ದೆ ಹೊಂದಿದೆ. ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಈ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ರಾಜ್ಯದೆಲ್ಲೆಡೆ ಈ ಪ್ರಯೋಗವನ್ನು ಜಾರಿಗಳಿಸಲಾಗುತ್ತದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News