ಆ.25, 26ರಂದು ಮುಂಬೈನಲ್ಲಿ ವಿಪಕ್ಷಗಳ ಮೈತ್ರಿಕೂಟದ ಮುಂದಿನ ಸಭೆ: ಮೂಲಗಳು
Update: 2023-07-28 17:21 GMT
ಹೊಸದಿಲ್ಲಿ: 26 ಪ್ರತಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ಮೈತ್ರಿಕೂಟದ ಮುಂದಿನ ಸಭೆಯು ಆ.25 ಮತ್ತು 26ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆ (ಉದ್ಧವ ಠಾಕ್ರೆ ಬಣ) ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ಮೈತ್ರಿಕೂಟದ ಮೂರನೇ ಸಭೆಯನ್ನು ಆಯೋಜಿಸಲಿವೆ ಎಂದು ಅವು ತಿಳಿಸಿವೆ.
ಇದು ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಅಧಿಕಾರದಲ್ಲಿಲ್ಲದ ರಾಜ್ಯದಲ್ಲಿ ನಡೆಯಲಿರುವ ಮೊದಲ ಸಭೆಯಾಗಲಿದೆ.
ಮೈತ್ರಿಕೂಟದ ಮೊದಲ ಸಭೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆತಿಥ್ಯದಲ್ಲಿ ಪಾಟ್ನಾದಲ್ಲಿ ನಡೆದಿದ್ದರೆ ಎರಡನೇ ಸಭೆ ಕಾಂಗ್ರೆಸ್ ಆತಿಥ್ಯದಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು.
ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳು ಕರೆದಿರುವಂತೆ ‘ಮುಂಬೈ ಶೃಂಗಸಭೆ ’ಯು ಸ್ಥಾನ ಹಂಚಿಕೆ ಕುರಿತು ಚರ್ಚೆಯನ್ನು ಕೈಗತ್ತಿಕೊಳ್ಳುವ ನಿರೀಕ್ಷೆಯಿರುವುದರಿಂದ ಈ ಸಭೆಯು ಮಹತ್ವವನ್ನು ಪಡೆದುಕೊಂಡಿದೆ.