ನೂಹ್ ಗಲಭೆ ಪ್ರಕರಣ : ಮೋನು ಮನೇಸರ್ ಗೆ 14 ದಿನ ನ್ಯಾಯಾಂಗ ಬಂಧನ

Update: 2023-09-12 12:46 GMT

ಮೋನು ಮನೇಸರ್

ಹೊಸದಿಲ್ಲಿ : ಹರಿಯಾಣದ ನೂಹ್ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಘೋಷಿತ ಗೋರಕ್ಷಕ ಮೋನು ಮನೇಸರ್ ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ಆತನನ್ನು ಭಾರಿ ಬಿಗಿ ಭದ್ರೆತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಭಜರಂಗದಳದ ಪ್ರಮುಖನೂ ಆಗಿರುವ ಮೋನು ಮನೇಸರ್ನ ಮೇಲೆ ರಾಜಸ್ತಾನ ಮೂಲದ ಇಬ್ಬರು ಮುಸ್ಲಿಂ ಯುವಕರ ಕೊಲೆ ಪ್ರಕರಣವಿದೆ. ಕಳೆದ ಫೆಬ್ರವರಿಯಲ್ಲಿ ನಾಸಿರ್, ಜುನೈದ್ ಎಂಬಿಬ್ಬರನ್ನು ಸ್ವಯಂಘೋಷಿತ ಗೋರಕ್ಷಕರು ರಾಜಸ್ತಾನದ ಭಾರತ್ಪುರ ಜಿಲ್ಲೆಯಿಂದ ಅಪರಹಣ ಮಾಡಿದ್ದರು. ಮರುದಿನ ಹರಿಯಾಣದ ಭಿವಾನಿಯ ಲೊಹರು ಎಂಬಲ್ಲಿ ಸುಟ್ಟು ಕರಕಲಾದ ಕಾರಿನಲ್ಲಿ ಅವರ ಶವ ಪತ್ತೆಯಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News