ಬಿಜೆಪಿಯ 240 ಮುನ್ನಡೆಗಳ ಪೈಕಿ 20ರಲ್ಲಿ 10,000ಕ್ಕೂ ಕಡಿಮೆ ಮತಗಳಿಂದ ಮುನ್ನಡೆ

Update: 2024-06-04 09:21 GMT

Photo: PTI

ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲಕ್ಕೆ ಕಾರಣವಾಗುತ್ತಿದೆ. ಸುಮಾರು 40 ಸ್ಥಾನಗಳಲ್ಲಿ ಅತ್ಯಂತ ನಿಕಟ ಸ್ಪರ್ಧೆ ಇದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸದ್ಯ 240 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಸ್ವಂತ ಬಹುಮತ ದೊರೆಯುವ ಸಾಧ್ಯತೆ ಕಡಿಮೆ. ಅದು ಮುನ್ನಡೆಯಲ್ಲಿರುವ ಕ್ಷೇತ್ರಗಳ ಪೈಕಿ 20ರಲ್ಲಿ 10,000ಕ್ಕೂ ಕಡಿಮೆ ಮತಗಳ ಅಂತರದಿಂದ ಮುನ್ನಡೆಯಿದೆ. 11 ಕ್ಷೇತ್ರಗಳಲ್ಲಿ ಬಿಜೆಪಿಯ ಮುನ್ನಡೆಯ ಅಂತರ 5000ಕ್ಕೂ ಕಡಿಮೆಯಾಗಿದೆ, ಆರರಲ್ಲಿ ಮುನ್ನಡೆ 2000ಕ್ಕೂ ಕಡಿಮೆ ಹಾಗೂ ಮೂರರಲ್ಲಿ 1,000ಕ್ಕೂ ಕಡಿಮೆ ಮತಗಳ ಮುನ್ನಡೆ ಪಕ್ಷಕ್ಕೆ ಇದೆ.

ಕಾಂಗ್ರಸ್‌ ಮುನ್ನಡೆ ಸಾಧಿಸಿರುವ 97 ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಮುನ್ನಡೆ ಪ್ರಮಾಣ 2000ಕ್ಕಿಂತಲೂ ಕಡಿಮೆಯಿದ್ದರೆ ಎಂಟು ಕ್ಷೇತ್ರಗಳಲ್ಲಿ ಮುನ್ನಡೆ ಮತಗಳು 5000ಕ್ಕೂ ಕಡಿಮೆ ಹಾಗೂ 12 ಸ್ಥಾನಗಳಲ್ಲಿ 10,000ಕ್ಕೂ ಕಡಿಮೆ ಮತಗಳ ಮುನ್ನಡೆಯಿದೆ.

ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿರುವ 36 ಕ್ಷೇತ್ರಗಳಲ್ಲಿ ಎರಡರಲ್ಲಿ 5000ಕ್ಕೂ ಕಡಿಮೆ ಮತಗಳ ಮುನ್ನಡೆಯಿದ್ದು ನಾಲ್ಕು ಕಡೆ ಮುನ್ನಡೆ 10,000ಕ್ಕೂ ಕಡಿಮೆ ಮತಗಳಾಗಿವೆ.

ಟಿಎಂಸಿ ಮುನ್ನಡೆ ಸಾಧಿಸಿರುವ 31 ಸ್ಥಾನಗಳಲ್ಲಿ ಎರಡರಲ್ಲಿ ಮುನ್ನಡೆ ಮತಗಳ ಸಂಖ್ಯೆ 5000ಕ್ಕೂ ಕಡಿಮೆ ಇದೆ. ಡಿಎಂಕೆ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಒಂದು ಸ್ಥಾನದಲ್ಲಿ ಮುನ್ನಡೆ ಮತಗಳ ಸಂಖ್ಯೆ 10,000ಕ್ಕೂ ಕಡಿಮೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News