ಗುಜರಾತಿನ ಮೂರನೇ ಒಂದರಷ್ಟು ಜನಸಂಖ್ಯೆ ಬಿಪಿಎಲ್ ವರ್ಗಕ್ಕೆ ಸೇರಿದೆ: ವರದಿ
Update: 2023-10-04 02:37 GMT
ಹೊಸದಿಲ್ಲಿ : ಗುಜರಾತಿನ ಮೂರನೇ ಒಂದರಷ್ಟು ಜನಸಂಖ್ಯೆಯು ಬಡತನದ ರೇಖೆಯಡಿ ಬದುಕು ಸಾಗಿಸುತ್ತಿದ್ದು,ಇದರಲ್ಲಿ 31 ಲಕ್ಷ ಕುಟುಂಬಗಳು ಸೇರಿವೆ.
ಬಿಪಿಎಲ್ ವರ್ಗಕ್ಕೆ ಸೇರಲು ಗರಿಷ್ಠ ತಲಾದಾಯವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ 816 ರೂ.(ದಿನವೊಂದಕ್ಕೆ 26 ರೂ.) ಮತ್ತು ನಗರ ಪ್ರದೇಶಗಳಲ್ಲಿ ಮಾಸಿಕ 1,000 ರೂ.(ದಿನವೊಂದಕ್ಕೆ 32 ರೂ.)ಗಳಿಗೆ ನಿಗದಿಗೊಳಿಸಲಾಗಿದೆ.
ಗುಜರಾತಿನಲ್ಲಿ ಒಟ್ಟು 31,61,310 ಬಿಪಿಎಲ್ ಕುಟುಂಬಗಳನ್ನು ಗುರುತಿಸಲಾಗಿದ್ದು,ಈ ಪೈಕಿ 16,28,744 ಕುಟುಂಬಗಳನ್ನು ಕಡುಬಡವರು ಮತ್ತು 15,32,566 ಕುಟುಂಬಗಳನ್ನು ಬಡವರು ಎಂದು ವರ್ಗೀಕರಿಸಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಬಚ್ಚುಭಾಯಿ ಖಬಾಡ್ ಇತ್ತೀಚಿಗೆ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದ್ದರು.
ವರ್ಷಗಳು ಕಳೆದಂತೆ ಬಿಪಿಎಲ್ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ದತ್ತಾಂಶಗಳು ಸೂಚಿಸಿವೆ.