‘ಫ್ರೆಡ್ ಡ್ಯಾರಿಂಗ್ಟನ್’ ಪ್ರಶಸ್ತಿ ಪಡೆದ ಮರಳು ಶಿಲ್ಪ ಕಲಾವಿದ ಪಟ್ನಾಯಕ್

Update: 2025-04-06 20:50 IST
‘ಫ್ರೆಡ್ ಡ್ಯಾರಿಂಗ್ಟನ್’ ಪ್ರಶಸ್ತಿ ಪಡೆದ ಮರಳು ಶಿಲ್ಪ ಕಲಾವಿದ ಪಟ್ನಾಯಕ್
  • whatsapp icon

ಹೊಸದಿಲ್ಲಿ: ಭಾರತೀಯ ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್ ಅವರು ಬ್ರಿಟನ್‌ ನ ವೀಮೌತ್‌ ನಲ್ಲಿ ಆಯೋಜಿತ ಪ್ರತಿಷ್ಠಿತ ಅಂತರರಾಷ್ಟ್ರೀಯ ಮರಳು ಕಲಾ ಉತ್ಸವ ಸ್ಯಾಂಡ್ ವರ್ಲ್ಡ್ 2025ರಲ್ಲಿ ‘ಫ್ರೆಡ್ ಡ್ಯಾರಿಂಗ್ಟನ್ ಸ್ಯಾಂಡ್ ಮಾಸ್ಟರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮರಳು ಶಿಲ್ಪ ಕಲಾಕ್ಷೇತ್ರದಲ್ಲಿ ಪಟ್ನಾಯಕ್ ಅವರ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಉತ್ಸವದ ಅಂಗವಾಗಿ ಪಟ್ನಾಯಕ್ ‘ವಿಶ್ವ ಶಾಂತಿ’ ಸಂದೇಶದೊಂದಿಗೆ 10 ಅಡಿ ಎತ್ತರದ ಗಣೇಶನ ಮರಳು ಶಿಲ್ಪವನ್ನು ರಚಿಸಿದ್ದಾರೆ.

‘ಇಂದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿರುವ ಮೊದಲ ಭಾರತೀಯ ಎಂಬ ಗೌರವ ನನ್ನದಾಗಿದೆ’ ಎಂದು ಪಟ್ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News