ಪ್ರಧಾನಿ ಮೋದಿ ಭಾರತದ ಉನ್ನತಿಗಾಗಿ ಧ್ಯಾನ ಮಾಡುತ್ತಿದ್ದಾರೆ : ಬಿಜೆಪಿ ನಾಯಕ ಕೇಶವನ್

Update: 2024-05-31 15:05 GMT

ನರೇಂದ್ರ ಮೋದಿ | PC: PTI 

ಚೆನ್ನೈ : ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸಿ.ಆರ್.ಕೇಶವನ್ ಅವರು, ಪ್ರಧಾನಿಯವರು ವೈಯಕ್ತಿಕ ಮೋಕ್ಷ ಪ್ರಾಪ್ತಿಗಾಗಿ ಅಲ್ಲ. ಭಾರತದ ಉನ್ನತಿಗಾಗಿ ಧ್ಯಾನ ಮಾಡುತ್ತಿದ್ದಾರೆ ಎಂದು ಶುಕ್ರವಾರ ಇಲ್ಲಿ ಹೇಳಿದರು.

ಮೋದಿಯವರು ಸ್ವಾಮಿ ವಿವೇಕಾನಂದರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದಾರೆ. ಈ ಧ್ಯಾನವು ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲಿನ ಘಟನೆಯಾಗಲಿದೆ. 45 ಗಂಟೆಗಳ ಧ್ಯಾನವನ್ನು ಪೂರೈಸಿದ ಬಳಿಕ ಜೂ.1ರಂದು ಅವರು ಭಾರತದ ಜನತೆಯ ಸೇವೆಗಾಗಿ ಹೊಸಸಂಕಲ್ಪ ಮತ್ತು ನಂಬಿಕೆಯೊಂದಿಗೆ ಹೊರಬರುತ್ತಾರೆ ಎಂದರು.

ಮೋದಿಯವರು ಮೂರನೇ ಬಾರಿ ಅಧಿಕಾರಕ್ಕೆ ಮರಳುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ ಕೇಶವನ್, ಜೂ.4ರಂದು ಸ್ವಾಮಿ ವಿವೇಕಾನಂದರು ಮತ್ತು ಭಾರತದ ಜನತೆಯ ಆಶೀರ್ವಾದಗಳೊಂದಿಗೆ ವಿಕಸಿತ ಭಾರತವನ್ನಾಗಿಸಲು ಕರ್ತವ್ಯ ಕಾಲದಲ್ಲಿ ದೇಶವನ್ನು ಮುನ್ನಡೆಸುವ ತನ್ನ ಐತಿಹಾಸಿಕ ಪ್ರಯಾಣವನ್ನು ಅವರು ಮುಂದುವರಿಸುತ್ತಾರೆ ಎಂದು ಹೇಳಿದರು.

ಮೋದಿ ಮತ್ತು ಸ್ವಾಮಿ ವಿವೇಕಾನಂದರಲ್ಲಿ ಸಾಮ್ಯತೆಗಳನ್ನು ಗುರುತಿಸಿದ ಕೇಶವನ್, ಮೋದಿಯವರು ವಿವೇಕಾನಂದರ ನರೇಂದ್ರ ಹೆಸರನ್ನು ಹಂಚಿಕೊಂಡಿರುವುದು ಮಾತ್ರವಲ್ಲ,ಅವರ ಜೀವನ ಮತ್ತು ಧ್ಯೇಯಗಳಿಂದ ಸ್ಫೂರ್ತಿಯನ್ನೂ ಪಡೆದುಕೊಂಡಿದ್ದಾರೆ. ಇದರ ಪರಿಣಾಮವನ್ನು ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರ ಕೆಲಸಗಳಲ್ಲಿ ನೋಡಬಹುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News