ಪ್ರಧಾನಿ ಸಂಸತ್ತಿಗೆ ಬರುತ್ತಿಲ್ಲ, ಮಣಿಪುರಕ್ಕೂ ಹೋಗಿಲ್ಲ: ಅವಿಶ್ವಾಸ ಚರ್ಚೆ ವೇಳೆ ಟಿ.ಎಂ.ಸಿ

Update: 2023-08-08 09:18 GMT

Photo: PTI

ಹೊಸದಿಲ್ಲಿ: ಮಣಿಪುರದ ಅಲ್ಪಸಂಖ್ಯಾತರನ್ನು ನಿರ್ದಯವಾಗಿ ಕೊಲ್ಲಲಾಗಿದೆ, 143 ಜನರನ್ನು ಕೊಂದಿದ್ದಾರೆ, 65,000 ಜನರು ರಾಜ್ಯವನ್ನು ತೊರೆದಿದ್ದಾರೆ, ಇಬ್ಬರು ಮಹಿಳೆಯರನ್ನು  ಸಾಮೂಹಿಕ ಅತ್ಯಾಚಾರ ಮಾಡಿ ಮಣಿಪುರದ ಬೀದಿಗಳಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಡಮ್ ಡಮ್ ನ ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.

ಸಿಎಂ ಅಸಹಾಯಕರಾಗಿದ್ದಾರೆ, ಪ್ರಧಾನಿ ಸಂಸತ್ತಿಗೆ ಬರುತ್ತಿಲ್ಲ ಹಾಗೂ ಅವರು ಮಣಿಪುರ ರಾಜ್ಯಕ್ಕೂ ಹೋಗಿಲ್ಲ. ಆದರೆ, I.N.D.I.A. ಪಕ್ಷಗಳು ಅಲ್ಲಿಗೆ ಹೋಗಿ ಏನಾಯಿತು ಎಂದು ಅರ್ಥಮಾಡಿಕೊಂಡವು ಎಂದರು.

"(ನಿಷೇಧಿತ) ಬಿಬಿಸಿ ಸಾಕ್ಷ್ಯಚಿತ್ರ ಅಥವಾ ಗುಜರಾತ್ ಗಲಭೆಗಳ ಬಗ್ಗೆ ಮಾತನಾಡಲು ನಾನು ಇಲ್ಲಿಗೆ ಬಂದಿಲ್ಲ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಎಲ್ಲಾ ಹಣವನ್ನು ನಿಲ್ಲಿಸಿದೆ. 7,300 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ. ಈ ಸರಕಾರವು ಹೃದಯಹೀನ ವಾಗಿದೆ. ಅವರು ಬಂಗಾಳಕ್ಕೆ ನಿಯೋಗಗಳನ್ನು ಕಳುಹಿಸುತ್ತಾರೆ, ಆದರೆ ಒಂದು ನಿಯೋಗವೂ ಮಣಿಪುರಕ್ಕೆ ಹೋಗಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News