ಪ್ರಧಾನಿ ನರೇಂದ್ರ ಮೋದಿ ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದಾರೆ : ರಾಹುಲ್ ಗಾಂಧಿ
Update: 2024-04-28 15:28 GMT
ಕಟಕ್: ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಲಿಯಾಧೀಶರಿಗಾಗಿ ಸರಕಾರವನ್ನು ನಡೆಸುತ್ತಿದ್ದರೆ ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಆಯ್ದ ಕೆಲವರಿಗಾಗಿ ಕೆಲಸ ಮಾಡುವ ಸರಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ಆರೋಪಿಸಿದರು.
ಇಲ್ಲಿಯ ಸಾಲೇಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಬಿಜೆಡಿ ಮತ್ತು ಬಿಜೆಪಿ ಚುನಾವಣೆಗಳಲ್ಲಿ ಪರಸ್ಪರರ ವಿರುದ್ಧ ಕಾದಾಡುತ್ತಿವೆಯಾದರೂ ವಾಸ್ತವದಲ್ಲಿ ಅವು ಪರಸ್ಪರ ಕೈಜೋಡಿಸಿವೆ. ಇದನ್ನು ಪಾಲುದಾರಿಕೆ ಅಥವಾ ಮದುವೆ ಎಂದು ಬೇಕಾದರೂ ಕರೆಯಿರಿ, ಬಿಜೆಡಿ ಮತ್ತು ಬಿಜೆಪಿ ಒಂದಾಗಿವೆ ಎಂದು ಹೇಳಿದರು.
ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಅವರ ಆಪ್ತ ವಿ.ಕೆ.ಪಾಂಡಿಯನ್ ಸರಕಾರವನ್ನು ನಡೆಸುತ್ತಿದ್ದಾರೆ ಎಂದರು. ಬಿಜೆಡಿ ಮತ್ತು ಬಿಜೆಪಿ ಒಡಿಶಾದ ಸಂಪತ್ತನ್ನು ಲೂಟಿ ಮಾಡಿವೆ ಎಂದು ಅವರು ಆರೋಪಿಸಿದರು.