ರಾಹುಲ್ ಗಾಂಧಿಯನ್ನು ರಾವಣನಿಗೆ ಹೋಲಿಸಿದ ಬಿಜೆಪಿ: ಪ್ರಧಾನಿ ಮೋದಿ, ನಡ್ಡಾಗೆ ಪ್ರಿಯಾಂಕಾ ಗಾಂಧಿ ತರಾಟೆ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಂತೆ ಚಿತ್ರಿಸಿರುವ ಪೋಸ್ಟರ್ ಹಂಚಿಕೊಂಡಿರುವ ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಅತ್ಯಂತ ಗೌರವಾನ್ವಿತ ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರೇ, ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಅಧೋಗತಿಗೆ ಕೊಂಡೊಯ್ಯಲು ಬಯಸುತ್ತೀರಿ? ನಿಮ್ಮ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಆಗುತ್ತಿರುವ ಹಿಂಸಾತ್ಮಕ ಮತ್ತು ಪ್ರಚೋದನಾಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ? ನೀವು ಪರಿಶುದ್ಧತೆಯ ಪ್ರಮಾಣ ವಚನ ಸ್ವೀಕರಿಸಿ ಹೆಚ್ಚು ಸಮಯ ಕಳೆದಿಲ್ಲ, ಆಗಲೇ ನೀವು ನಿಮ್ಮ ಪ್ರಮಾಣಗಳನ್ನು ಮರೆತಿದ್ದೀರಾ?" ಎಂದು ಪ್ರಿಯಾಂಕಾ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣ ಎಂದು ಬಿಂಬಿಸುವ ಚಿತ್ರವನ್ನು ಹಂಚಿಕೊಂಡಿತ್ತು.
ಅದರಲ್ಲಿ, ರಾಹುಲ್ ಗಾಂಧಿ ಅವರನ್ನು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿತ್ತು.
"ಭಾರತವು ಅಪಾಯದಲ್ಲಿದೆ. ಇವರು ದುಷ್ಟ. ಧರ್ಮ ವಿರೋಧಿ. ರಾಮನ ವಿರೋಧಿ. ಅವನ ಗುರಿ ಭಾರತವನ್ನು ನಾಶಮಾಡುವುದು" ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿತ್ತು.
सर्वश्री @narendramodi जी एवं श्री @JPNadda जी! आप राजनीति और बहस-मुबाहसे को गिरावट की कौन-सी मंज़िल तक ले जाना चाहते हैं?
— Priyanka Gandhi Vadra (@priyankagandhi) October 5, 2023
आपकी पार्टी के आधिकारिक ट्विटर हैंडल से जो हिंसक और उकसाऊ ट्वीट किये जा रहे हैं, क्या उसमें आपकी सहमति है ?
ज़्यादा समय नहीं बीता, आपने शुचिता की क़सम…