ವಿಶೇಷ ಅಧಿವೇಶನ: ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ ಕಲಾಪ

Proceedings of special parliament session to be held in New Building from today

Update: 2023-09-19 06:17 GMT

Photo: PTI

ಹೊಸದಿಲ್ಲಿ: ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ನಡೆಯಲಿವೆ.

5 ದಿನಗಳ ವಿಶೇಷ ಅಧಿವೇಶನ ಸೋಮವಾರ ಆರಂಭವಾಗಿದ್ದು, ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪಗಳು ನಡೆಯಲಿವೆ. ಮಧ್ಯಾಹ್ನ 1.15ಕ್ಕೆ ಲೋಕಸಭೆಯ ಕಲಾಪ ಆರಂಭವಾಗಲಿದೆ.

''ನಾನು ಸಂಸತ್ ಸದಸ್ಯನಾಗಿ ಈ ಕಟ್ಟಡವನ್ನು ಪ್ರವೇಶಿಸಿದಾಗ, ನಾನು ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ'' ಎಂದು ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವಾದ ಸೋಮವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

"ಈ ಕಟ್ಟಡಕ್ಕೆ ವಿದಾಯ ಹೇಳುವುದು ಭಾವನಾತ್ಮಕ ಕ್ಷಣವಾಗಿದೆ...ಅನೇಕ ಕಹಿ-ಸಿಹಿ ನೆನಪುಗಳು ಇದರೊಂದಿಗೆ ಸೇರಿಕೊಂಡಿವೆ. ನಾವೆಲ್ಲರೂ ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಸಾಕ್ಷಿಯಾಗಿದ್ದೇವೆ ಆದರೆ ಅದೇ ಸಮಯದಲ್ಲಿ ನಾವು 'ಪರಿವಾರ ಭಾವ'ಕ್ಕೆ ಸಾಕ್ಷಿಯಾಗಿದ್ದೇವೆ" ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News