ಕ್ಯೂಎಸ್ ವರ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್ಸ್: ಭಾರತದ ಅಗ್ರ ಸಂಸ್ಥೆಯಾಗಿ ಹೊರಹೊಮ್ಮಿದ ಜೆಎನ್‌ಯು
ಹೊಸದಿಲ್ಲಿ: ಈ ವರ್ಷದ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್ಸ್ ಪಟ್ಟಿಯಲ್ಲಿರುವ 424 ವಿವಿಗಳ ಪೈಕಿ 69 ಭಾರತೀಯ ವಿವಿಗಳು ಸ್ಥಾನ ಪಡೆದುಕೊಂಡಿವೆ.
ಈ ಪಟ್ಟಿಯಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿ (JNU) ಡೆವಲೆಪ್ಮೆಂಟ್ ಸ್ಟಡೀಸ್‌ನಲ್ಲಿ ಭಾರತದ ಅಗ್ರ ಶ್ರೇಣಿಯ ಹಾಗೂ ಜಾಗತಿಕ ಮಟ್ಟದಲ್ಲಿ 20ನೇ ಸ್ಥಾನ ಪಡೆದ ವಿವಿ ಆಗಿ ಹೊರಹೊಮ್ಮದೆ.
ಉಳಿದಂತೆ ಐಐಎಂ ಅಹ್ಮದಾಬಾದ್ ಬಿಸಿನೆಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ 22ನೇ ಸ್ಥಾನ ಪಡೆದಿದ್ದರೆ, ಸವೀತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಆ್ಯಂಡ್ ಟೆಕ್ನಿಕಲ್ ಸಾಯನ್ಸಸ್ (ಡೀಮ್ಡ್ ಟು ಬಿ ವಿವಿ) ಜಾಗತಿಕವಾಗಿ ಡೆಂಟಿಸ್ಟ್ರಿಯಲ್ಲಿ 24ನೇ ಸ್ಥಾನ ಪಡೆದಿದೆ. ಹೆಚ್ ಇಂಡೆಕ್ಸ್ ಎಂಬ ಹೆಸರಿನ ಕ್ಯೂಎಸ್ ಸೂಚಕದಲ್ಲಿ ಶೇ 100 ಅಂಕಗಳನ್ನು ಪಡೆದ ಏಕೈಕ ಭಾರತೀಯ ಸಂಸ್ಥೆ ಎಂಬ ಹೆಗ್ಗೆಳಿಕೆಗೆ ಸವೀತಾ ಇನ್‌ಸ್ಟಿಟ್ಯೂಟ್ ಪಾತ್ರವಾಗಿದೆ.
ಡೇಟಾ ಸಾಯನ್ಸ್ ಮತ್ತು ಪೆಟ್ರೋಲಿಯಂ ಇಂಜಿನಿಯರಿಂಗ್ ವಿಷಯಗಳ ಅಧ್ಯಯನದಲ್ಲಿ ಐಐಟಿ ಗುವಹಾಟಿ ಜಾಗತಿಕವಾಗಿ ಅಗ್ರ ಸಂಸ್ಥೆಗಳಲ್ಲಿ ಒಂದಾಗಿದೆ.