ಪೆರು ಗಣರಾಜ್ಯದ ರೈಲನ್ನು 'ವಂದೇ ಭಾರತ್ ರೈಲು' ಎಂದು ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೇ ಸಚಿವ

Update: 2024-09-28 10:09 GMT

Screengrab from the video | X/@zoo_bear

ಹೊಸದಿಲ್ಲಿ: ದಕ್ಷಿಣ ಅಮೆರಿಕದ ಪೆರು ಗಣರಾಜ್ಯದ ರೈಲಿನ ವಿಡಿಯೋವನ್ನು ವಂದೇ ಭಾರತ್ ರೈಲು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟನ್ನು ಎಕ್ಸ್ ನಲ್ಲಿ ಹಂಚಿಕೊಂಡ ಪತ್ರಕರ್ತ ಮುಹಮ್ಮದ್ ಝುಬೈರ್, ಪೆರುವಿನಲ್ಲಿ ವಿಸ್ಟಾಡೋಮ್ ರೈಲನ್ನು ಪ್ರಾರಂಭಿಸಿದ್ದಕ್ಕಾಗಿ ಮೋದಿಜಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಪೆರು ರೈಲಿನ ಹಳೆಯ ವೀಡಿಯೊವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ರೈಲು ಎಂದು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಇನ್ನೋರ್ವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಮೋದಿಯವರ ನಾಯಕತ್ವದಲ್ಲಿ, ಈಗಾಗಲೇ ಮೂರ್ಖರ ಸೈನ್ಯವಿತ್ತು ಆದರೆ, ಈಗ ಕುರುಡರು ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಪೆರು ರೈಲು ಎಂದು ಎಂಜಿನ್ ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ, ಆದರೂ ಅದು ಭಾರತದ್ದು ಎಂದು ಬಿಂಬಿಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ನಮ್ಮ ರೈಲ್ವೇ ಸಚಿವರು ದೇಶಭಕ್ತಿಯ ಅಂತಿಮ ಹಂತವನ್ನು ಅನ್ಲಾಕ್ ಮಾಡಿದಂತೆ ತೋರುತ್ತಿದೆ, ಅಂತರಾಷ್ಟ್ರೀಯ ರೈಲುಗಳಿಗೆ 'ಮೇಕ್ ಇನ್ ಇಂಡಿಯಾ' ಎಂದು ಮರುನಾಮಕರಣ! ಮಚು ಪಿಚ್ಚು ವಂದೇ ಭಾರತ್ ಎಕ್ಸ್ಪ್ರೆಸ್ ನ ನಿಲ್ದಾಣವಾಗಿದೆ ಎಂದು ಯಾರಿಗೆ ಗೊತ್ತಿತ್ತು? ಎಂದು ಇನ್ನೋರ್ವ ಬಳಕೆದಾರರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News