ರಾಜಸ್ಥಾನ | ಫೈರಿಂಗ್ ರೇಂಜ್‌ನಲ್ಲಿ ಸ್ಪೋಟ; ಇಬ್ಬರು ಯೋಧರು ಮೃತ್ಯು
ಜೈಪುರ : ರಾಜಸ್ಥಾನದ ಬಿಕೇನರ್‌ನ ಮಹಾಜನ್ ಫೀಲ್ಡ್ ಫಯರಿಂಗ್ ರೇಂಜ್‌ನ ಉತ್ತರ ಶಿಬಿರದಲ್ಲಿ ಬುಧವಾರ ತರಬೇತಿ ಪಡೆಯುತ್ತಿದ್ದ ಸಂದರ್ಭ ಟ್ಯಾಂಕ್‌ಗೆ ಸ್ಫೋಟಕಗಳನ್ನು ಹೇರಿಸುತ್ತಿರುವಾಗ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಈ ವಾರದಲ್ಲಿ ನಡೆಯುತ್ತಿರುವ ಎರಡನೇ ಮಾರಣಾಂತಿಕ ಘಟನೆ.
ದುರಂತದಲ್ಲಿ ಮೃತಪಟ್ಟ ಯೋಧರನ್ನು ಉತ್ತರಪ್ರದೇಶ ದಿಯೋರಿಯಾದ ಅಶುತೋಶ್ ಮಿಶ್ರಾ ಹಾಗೂ ರಾಜಸ್ಥಾನ ದೌಸಾದ ಜಿತೇಂದ್ರ ಎಂದು ಗುರುತಿಸಲಾಗಿದೆ.
ಅವರು ಟ್ಯಾಂಕ್‌ಗೆ ಸ್ಫೋಟಕಗಳನ್ನು ಹೇರುತ್ತಿರುವಾಗ ಚಾರ್ಜರ್ ಸ್ಫೋಟಗೊಂಡಿತು. ಇದರಿಂದ ಇಬ್ಬರು ಯೋಧರು ಸಾವನ್ನಪ್ಪಿದರು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಅವರು ಹೇಳಿದ್ದಾರೆ.
‘‘ಮೂವರು ಯೋಧರು ಟ್ಯಾಂಕ್‌ನೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಸ್ಫೋಟದಲ್ಲಿ ಅಸುತೋಷ್ ಮಿಶ್ರಾ ಹಾಗೂ ಜಿತೇಂದ್ರ ಮೃತಪಟ್ಟರು. ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ಚಂಡಿಗಢಕ್ಕೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಲಂಕರನ್ಸರ್ (ಬಿಕೇನರ್)ನ ಸರ್ಕಲ್ ಅಧಿಕಾರಿ ನರೇಂದ್ರ ಕುಮಾರ್ ಪೂನಿಯಾ ತಿಳಿಸಿದ್ದಾರೆ.