ರಾಮಲಿಂಗಂ ಹತ್ಯೆ ಪ್ರಕರಣ | ಪಿಎಫ್‌ಐ ಸದಸ್ಯರಿಗೆ ಸಂಬಂಧಿಸಿದ ತಮಿಳುನಾಡಿನ 20 ಕಡೆ ಎನ್ ಐ ಎ ದಾಳಿ
![ರಾಮಲಿಂಗಂ ಹತ್ಯೆ ಪ್ರಕರಣ | ಪಿಎಫ್‌ಐ ಸದಸ್ಯರಿಗೆ ಸಂಬಂಧಿಸಿದ ತಮಿಳುನಾಡಿನ 20 ಕಡೆ ಎನ್ ಐ ಎ ದಾಳಿ ರಾಮಲಿಂಗಂ ಹತ್ಯೆ ಪ್ರಕರಣ | ಪಿಎಫ್‌ಐ ಸದಸ್ಯರಿಗೆ ಸಂಬಂಧಿಸಿದ ತಮಿಳುನಾಡಿನ 20 ಕಡೆ ಎನ್ ಐ ಎ ದಾಳಿ](https://www.varthabharati.in/h-upload/2025/01/28/1500x900_1318678-nia-raid.webp)
PC | THE WEEK
ಚೆನ್ನೈ: ತಂಜಾವೂರು ಜಿಲ್ಲೆಯ ತಿರುಪುವನಮ್‌ನಲ್ಲಿ ಫೆಬ್ರವರಿ 2019ರಲ್ಲಿ ನಡೆದಿದ್ದ ಪಟ್ಟಾಳಿ ಮಕ್ಕಳ ಕಚ್ಛಿ(ಪಿಎಂಕೆ) ಪದಾಧಿಕಾರಿ ವಿ.ರಾಮಲಿಂಗಂ ಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಎನ್ ಐ ಎ ಮಂಗಳವಾರ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಇಬ್ಬರು ಮಾಜಿ ಸದಸ್ಯರಿಗೆ ಸಂಬಂಧಿಸಿದ ಚೆನ್ನೈ ಮತ್ತು ಮೈಲಾದುತರೈಗಳಲ್ಲಿಯ ನಿವಾಸಗಳು ಮತ್ತು ಇತರ ಆವರಣಗಳು ಸೇರಿದಂತೆ 20 ಕಡೆಗಳಲ್ಲಿ ದಾಳಿ ಕಾರ್ಯಾಚರಣೆಯನ್ನು ನಡೆಸಿದೆ.
ಕೇರಳ,ಕರ್ನಾಟಕ ಮತ್ತು ಚೆನ್ನೈನ ಎನ್ ಐ ಎ ತಂಡಗಳು ದಾಳಿ ಮತ್ತು ಶೋಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಜ.25ರಂದು ತಂಜಾವೂರು ಜಿಲ್ಲೆಯ ಮಾಜಿ ಪಿಎಫ್‌ಐ ಸದಸ್ಯರಾದ ಅಬ್ದುಲ್ ಮಜೀದ್ ಮತ್ತು ಶಾಹುಲ್ ಹಮೀದ್ ಅವರನ್ನು ಬಂಧಿಸಿತ್ತು.
ದುರ್ಬಲ ವರ್ಗಗಳ ಜನರ ಬಲವಂತದ ಮತಾಂತರವನ್ನು ವಿರೋಧಿಸಿದ್ದಕ್ಕಾಗಿ ರಾಮಲಿಂಗಂ ಹತ್ಯೆ ನಡೆದಿತ್ತು ಎಂದು ಆರೋಪಿಸಲಾಗಿದೆ.
ಕಳೆದ ವರ್ಷವೂ ತಮಿಳುನಾಡಿನ ಹಲವೆಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದ ಎನ್‌ಐಎ,18 ಜನರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.