ಅತ್ಯಾಚಾರ ಪ್ರಕರಣ: ನಟ ಸಿದ್ದೀಕ್‌ಗೆ ಜಾಮಿನು
Update: 2024-12-06 18:17 GMT
ತಿರುವನಂತಪುರ: ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಮಲೆಯಾಳಂ ನಟ ಸಿದ್ದೀಕ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾದಕ ದ್ರವ್ಯ ಘಟಕದ ಉಪ ಆಯುಕ್ತರ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಶುಕ್ರವಾರ ಮುಂಜಾನೆ ಸಿದ್ದೀಕ್ ಅವರನ್ನು ಬಂಧಿಸಿತ್ತು.
1 ಲಕ್ಷ ರೂ. ಬಾಂಡ್ ಹಾಗೂ ಜಾಮೀನು ಅವಧಿಯಲ್ಲಿ ರಾಜ್ಯ ತೊರೆಯಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಸಿದ್ದೀಕ್ ಅವರಿಗೆ ಜಾಮೀನು ನೀಡಿದೆ.