ರಾಜ್ಯಸಭೆಯಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ: ಪಕ್ಷಗಳ ಸಂಖ್ಯಾಬಲ ಹೇಗಿದೆ?

Update: 2025-04-03 12:16 IST
ರಾಜ್ಯಸಭೆಯಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ: ಪಕ್ಷಗಳ ಸಂಖ್ಯಾಬಲ ಹೇಗಿದೆ?

ಸಾಂದರ್ಭಿಕ ಚಿತ್ರ (PTI)

  • whatsapp icon

ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯ ಗುರುವಾರದ ವ್ಯವಹಾರದಲ್ಲಿ ಪಟ್ಟಿ ಮಾಡಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲೂ ಹೆಚ್ಚಿನ ಸಂಸದರನ್ನು ಹೊಂದಿದೆ. ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ.

ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನ 27 ಸಂಸದರು, ತೃಣಮೂಲ ಕಾಂಗ್ರೆಸ್‌ನ 13 ಸೇರಿದಂತೆ 88 ಸಂಸದರನ್ನು ಹೊಂದಿದೆ. ನವೀನ್ ಪಟ್ನಾಯಕ್ ನೇತೃತ್ವದ BJD ಪಕ್ಷವು 7 ಸಂಸದರನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News